Karnataka Chalanachitra Academy

Home → About us → Milestone

ನಮ್ಮ ಮೈಲಿಗಲ್ಲುಗಳು

ಜಾಗತಿಕ ಚಿತ್ರರಂಗದಲ್ಲಿ ಭಾರತೀಯ ಚಿತ್ರರಂಗ ತನ್ನದೇ ಆದ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿರುವುದು ಸಂಗೀತದ ಕಾರಣದಿಂದ. ಸಂಗೀತಕ್ಕೂ ಭಾರತೀಯ ಲಲಿತ ಕಲೆಗಳಿಗೂ ಅವಿನಾಭಾವ ಸಂಬಧವಿದೆ. ಮೂಕಿ ಚಿತ್ರಗಳು ಬಂದ ಕಾಲದಲ್ಲಿ ಕೂಡ ನಮ್ಮಲ್ಲಿ ಅವುಗಳು ಪ್ರದರ್ಶನವಾಗುತ್ತಾ ಇರುವ ಕಾಲದಲ್ಲಿ ಹಾಡುಗಳನ್ನು ಹಾಡುವ ಪದ್ದತಿ ಇತ್ತು. ಈ ಹಿನ್ನೆಲೆಯಲ್ಲಿ ಸಂಗೀತದ ಕುರಿತೇ ಈ ಚಿತ್ರೋತ್ಸವದಲ್ಲಿ ಒಂದು ವಿಭಾಗವನ್ನು ರೂಪಿಸಲು ನಿರ್ಧರಿಸಲಾಯಿತು. ಶಾಸ್ತಿಯ ಸಂಗೀತದ ಬಳಕೆಗೆ ಆದ್ಯತೆ ನೀಡಲಾಯಿತು. ತಾನ್‌ಸೇನ್, ಶಂಕರಾಭರಣ, ಬೈಜುಬಾವ್ರ, ಸಂತ ತುಕಾರಾಂ, ತ್ಯಾಗಯ್ಯ, ಮೀರಾ ಜೊತೆಗೆ ಕನ್ನಡದ ಶ್ರೀ ಪುರಂದರ ದಾಸರು, ಹಂಸಗೀತೆ, ಮಲಯಮಾರುತ, ವಾಣಿ ಹಾಗೂ ಸಂಧ್ಯಾರಾಗ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾದವು. ಚಿತ್ರದ ವೀಕ್ಷಣೆಯ ಜೊತೆಗೆ ವಿಶೇಷ ಅಧ್ಯಯನಕ್ಕೂ ಕೂಡ ಅವಕಾಶ ಕೊಡುವುದು ನಮ್ಮ ಉದ್ದೇಶವಾಗಿತ್ತು. ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಎನ್.ವಿದ್ಯಾಶಂಕರ್ ಅವರು ಸಾಕಷ್ಟು ಸಿದ್ದತೆ ಮಾಡಿದ್ದು ನಮಗೆ ನೆರವು ನೀಡಿತು.
ಎಲ್ಲಾ ಚಿತ್ರೋತ್ಸವಗಳಲ್ಲಿಯೂ ‘ಸಿಂಹಾವಲೋಕನ’ ಎನ್ನುವ ವಿಭಾಗ ಇರುತ್ತದೆ. ಈ ವರ್ಷ ಕನ್ನಡದವರೇ ಆದ ಅನಂತ್‌ನಾಗ್ ಅವರ ಕುರಿತು ಇಂತಹ ಸಿಂಹಾವಲೋಕನ ನಡೆಸಬೇಕು ಎಂಬ ನನ್ನ ಸೂಚನೆಗೆ ಎಲ್ಲರ ಬೆಂಬಲವೂ ದೊರಕಿತು. ಈ ಯೋಜನೆ ಹಲವರ ಮೆಚ್ಚಿಗೆಗೆ ಕೂಡ ಪಾತ್ರವಾಯಿತು. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ವಿಶೇಷ ಸಾಧನೆಯನ್ನು ಮಾಡುತ್ತಿದ್ದಾರೆ. ಇದನ್ನು ಪ್ರೋತ್ಸಾಹಿಸಬೇಕು ಎಂದು ಯೋಚಿಸಿದೆವು. ಹೀಗಾಗಿ ಈ ಚಿತ್ರೋತ್ಸವದಲ್ಲಿ ನಿರ್ದೇಶಕಿಯರಿಗಾಗಿ ಪ್ರತ್ಯೇಕ ವಿಭಾಗವೊಂದು ತೆರೆಯಲು ನಿರ್ಧರಿಸಿ ಅದನ್ನು ಕಾರ್ಯಗತ ಗೊಳಿಸಲಾಯಿತು. ಸಾಮಾಜಿಕ ಕಳಕಳಿಯ ಚಿತ್ರಗಳಿಗೂ ಚಿತ್ರೋತ್ಸವದಲ್ಲಿ ವಿಶೇಷ ಮಹತ್ವ ಲಭಿಸಿತು. ಹಾಗೆಯೇ ಅನ್‌ಸಂಗ್ ಇಂಡಿಯಾ ವಿಭಾಗದಲ್ಲಿ ಬ್ಯಾರಿ, ತುಳು, ಕೊಂಕಣಿ, ಬಂಜಾರ, ಬೋಡೋ ಹೀಗೆ ಭಾಷಾ ಅಲ್ಪ ಸಂಖ್ಯಾತರ ಚಿತ್ರಗಳಿಗೆ ಮಹತ್ವ ದೊರಕಿತು.
ಚಲನಚಿತ್ರ ಉದಯಿಸಿ ೧೨೫ ವರ್ಷಗಳಾದ ನಿಮಿತ್ತ ಹೆಜ್ಜೆ ಗುರುತುಗಳನ್ನು ದಾಖಲಿಸುವುದು ಸಾಂಸ್ಕೃತಿಕವಾಗಿ ನಮಗೆ ಮುಖ್ಯ ಎನ್ನಿಸಿತು. ಇದಕ್ಕಾಗಿಯೇ ಒಂದು ವಿಶೇಷ ವಿಭಾಗವು ಇದಕ್ಕಾಗಿಯೇ ಒಂದು ವಿಶೇಷ ವಿಭಾಗವು ರೂಪುಗೊಂಡಿತು. ಈ ವಿಭಾಗದಲ್ಲಿ ಸಿನಿಮಾ ಸಾಧಕರ ಕುರಿತ ಸಾಕ್ಷö್ಯಚಿತ್ರಗಳು, ಚಲನಚಿತ್ರದ ಪೋಸ್ಟರ್‌ಗಳು ನಡೆದು ಬಂದ ರೀತಿ ಹೀಗೆ ಹಲವು ಪ್ರಮುಖ ಸಂಗತಿಗಳು ಇದ್ದವು. ಒಟ್ಟಾಗಿ ೬೦ ದೇಶಗಳ ೧೭೫ ಸಮಕಾಲೀನ ಚಿತ್ರಗಳು ಉತ್ಸವದಲ್ಲಿ ಭಾಗವಹಿಸುವುದು ಖಚಿತವಾಯಿತು. ಜಪಾನ್, ಕೊರಿಯಾ, ಇರಾನ್, ಫಿಲಿಫೈನ್ಸ್, ಆಫ್ರಿಕಾ, ಕೆನಡಾ, ಪೊಲೆಂಡ್, ಜರ್ಮನಿಗಳಿಂದ ಸಮಕಾಲೀನ ಚಿತ್ರಗಳು ಪ್ರದರ್ಶನಗೊಂಡಿದ್ದು ವಿಶೇಷವಾಗಿತ್ತು.
ವ್ಯಕ್ತಿಚಿತ್ರಗಳನ್ನು ಆಧರಿಸಿದ ಇನ್ನೊಂದು ವಿಶೇಷ ವಿಭಾಗವನ್ನು ನಾವು ಯೋಚಿಸಿದೆವು. ಇದು ಸ್ಪೂರ್ತಿಯನ್ನು ನೀಡುವಂತೆ ಅಧ್ಯಯನಕ್ಕೂ ಪ್ರೇರಣೆ ನೀಡುವಂತೆ ಇರಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಈ ವಿಭಾಗದಲ್ಲಿ ರಷ್ಯಾದ ನಿರ್ದೇಶಕ ಆಂಡ್ರೊ ಚಾಕೋವಸ್ಕಿ, ಹಾಡುಗಾರ್ತಿ ಹೆಲನ್ ರೆಡ್ಡಿ, ಹೆಸರಾಂತ ಕನ್ನಡ ಲೇಖಕರಾದ ಎಸ್.ಎಲ್.ಭೈರಪ್ಪ., ಚಂದ್ರಶೇಖರ ಕಂಬಾರ, ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್, ಛಾಯಾಗ್ರಾಹಕ ವಿ.ಕೆ.ಮೂರ್ತಿಯವರ ಕುರಿತ ಚಿತ್ರಗಳು ಇದ್ದವು.
ಚಿತ್ರೋತ್ಸವದಲ್ಲಿ ಐದು ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಕನ್ನಡದ ಚಿತ್ರಗಳ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಪಾರದರ್ಶಕತೆ ಇರಲಿ ಎನ್ನುವ ಕಾರಣಕ್ಕೆ ಸ್ಥಳೀಯರ ಜೊತೆಗೆ ಹೊರ ರಾಜ್ಯದ ತೀರ್ಪುಗಾರರನ್ನೂ ಸೇರಿಸಿ ಮೊದಲ ಹಂತದ ಪರಿಶೀಲನಾ ಸಮಿತಿ ರಚಿಸಲಾಯಿತು. ಇದಕ್ಕೆ ಆರಂಭದಲ್ಲಿಯೇ ವಿರೋಧ ಎದುರಾಯಿತು. ಗೊಂದಲ ಪರಿಹರಿಸುವ ಸಲುವಾಗಿ ಹೀಗೆ ವಿರೋಧ ವ್ಯಕ್ತಪಡಿಸಿದವರನ್ನು ಕರೆದು ಚರ್ಚಿಸಿದೆವು. ದೇಶದಲ್ಲಿ ಮತ್ತು ವಿದೇಶದಲ್ಲಿ ಕೂಡ ಹೀಗೆ ಅನ್ಯ ಭಾಷೆಯವರನ್ನು ಒಳಗೊಂಡ ಸಮಿತಿ ರಚಿಸುವ ಪದ್ದತಿ ಇದೆ. ಹೊರಗಿನವರಿಗೆ ಯಾವುದೇ ಪೂರ್ವಾಗ್ರಹ ಇರುವುದಿಲ್ಲ ಇದರಿಂದನಿಜವಾದ ಪ್ರತಿಭೆಗೆ ಮನ್ನಣೆ ದೊರಕುತ್ತದೆ ಎಚಿದು ವಿವರಿಸಿದೆವು. ಸದುದ್ದೇಶವನ್ನು ಅರಿತು ಅವರೆಲ್ಲರೂ ಬೆಂಬಲ ಸೂಚಿಸಿದರು. ಹೀಗೆ ಐದು ವಿಭಾಗದಿಂದ ೪೬ ತೀರ್ಪುಗಾರರನ್ನು ಆಯ್ಕೆ ಮಾಡಲಾಗಿತ್ತು. ಕೊನೆಯಲ್ಲಿ ಆಯ್ಕೆಯಾದ ಚಿತ್ರಗಳ ಪಟ್ಟಿಯನ್ನು ನೋಡಿದಾಗ ನಮ್ಮೆಲ್ಲರ ಉದ್ದೇಶ ಸಫಲವಾಯಿತು ಎನ್ನುವ ಆತ್ಮತೃಪ್ತಿ ದೊರಕಿತು.
ಬದುಕಿನ ಬಂಗಾರದ ದಿನ ಫೆಬ್ರವರಿ ೨೬ ಬಂದೇ ಬಿಟ್ಟಿತು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿ. ಒಂದು ರೀತಿಯಲ್ಲಿ ಇದು ಅಕಾಡೆಮಿಯ ಸತ್ವಪರೀಕ್ಷೆಯ ಕಾಲ. ಅದಕ್ಕಾಗಿ ನಮ್ಮ ತಂಡ ಚೆನ್ನಾಗಿಯೇ ಪೂರ್ವತಯಾರಿ ನಡೆಸಿತ್ತು. ಚಲನಚಿತ್ರ ಇತಿಹಾಸವನ್ನು ಹಲವು ನೆಲೆಗಳಲ್ಲಿ ನೋಡಬಹುದು. ಅದಕ್ಕೆ ಸೂಕ್ತವಾದಂತೆ ವಿಶ್ಲೇಷಿಸಬಹುದು. ಇಂತಹ ಹಲವು ಪ್ರಯತ್ನಗಳು ಈಗಾಗಲೇ ಆಗಿ ಹೋಗಿದ್ದವು. ನಾವು ಚಿತ್ರರಂಗಕ್ಕೆ ಕಲಾವಿದೆಯ ಕೊಡುಗೆಯ ನೆಲೆಯಲ್ಲಿ ನೋಡಬಹುದಾ ಎಂದು ಚಿಂತಿಸಿದೆವು. ಚಿತ್ರರಂಗಕ್ಕೆ ಕಲಾವಿದೆಯ ಕೊಡುಗೆಯ ನೆಲೆಯಲ್ಲಿ ನೋಡಬಹುದಾ ಎಂದು ಚಿಂತಿಸಿದೆವು. ಹಾಗಾಗಿ ಕೂಚುಪುಡಿ ಕಲಾವಿದೆ ಶ್ರೀಮತಿ ವೀಣಾಮೂರ್ತಿ ವಿಜಯ್ ಹಾಗೂ ಕಥಕ್ ನೃತ್ಯಪಟು ಶ್ರೀಮತಿ ಶಮಾಬಾಟೆ ಅವರೊಂದಿಗೆ ಚರ್ಚಿಸಿದೆವು. ಚಿತ್ರರಂಗದ ಇತಿಹಾಸದಲ್ಲಿ ನೃತ್ಯಪಟು ಶ್ರೀಮತಿ ಶಮಾಬಾಟೆ ಅವರೊಂದಿಗೆ ಚರ್ಚಿಸಿದೆವು. ಚಿತ್ರರಂಗದ ಇತಿಹಾಸದಲ್ಲಿ ಕಲಾವಿದೆಯರು ವಹಿಸಿದ ಪ್ರಮುಖ ಪಾತ್ರದ ಕುರಿತು ಚಾರಿತ್ರಿಕ ಯಾನವನ್ನು ಸಿದ್ದಗೊಳಿಸಿದೆವು. ಮೂಕಿ ಚಿತ್ರಗಳಿಂದ ಇಂದಿನವರೆಗೂ ಇದನ್ನು ಅತ್ಯುತ್ತಮ ಹಾಡುಗಳ ಮೂಲಕ ಸಿದ್ದಗೊಳಿಸಲಾಯಿತು. ಕಡಿಮೆ ಅವಕಾಶ ಸಿಕ್ಕರೂ ಇದು ಅತ್ಯುತ್ತಮ ಕಾರ್ಯಕ್ರಮ ಆಗಬೇಕು ಎಂದು ಇದಕ್ಕಾಗಿ ಹಗಲೂ ರಾತ್ರಿ ಆಗಬೇಕು ಎಂದು ಇದಕ್ಕಾಗಿ ಹಗಲೂ ರಾತ್ರಿ ಶ್ರಮಿಸಿದೆ. ನಿತ್ಯವೂ ರಿಹರ್ಸಲ್‌ಗೆ ಹೋಗಿ ಅದರ ಸ್ವರೂಪವು ಸರಿಯಾಗಿದೆಯೇ ಅದರ ಸ್ವರೂಪವು ಸರಿಯಾಗಿದೆಯೇ ಎಂಬುದನ್ನು ನಾನು ಖಚಿತ ಪಡಿಸಿಕೊಳ್ಳುತ್ತಿದ್ದೆ. ಸಿನಿಮಾ ಸಂಸ್ಕೃತಿಯನ್ನು ಬಿಂಬಿಸುವAತೆ ರೂಪುಗೊಂಡ ಈ ನೃತ್ಯರೂಪಕ ಚೆನ್ನಾಗಿ ಮೂಡಿ ಬಂದಿದ್ದು ಮಾತ್ರವಲ್ಲದೆ ಬಹುಕಾಲ ಎಲ್ಲರ ನೆನಪಿನಲ್ಲಿ ಉಳಿಯಿತು. ಇದರ ಮೂಡಿ ಬಂದಿದ್ದು ಮಾತ್ರವಲ್ಲದೆ ಬಹುಕಾಲ ಎಲ್ಲರ ನೆನಪಿನಲ್ಲಿ ಉಳಿಯಿತು. ಇದರ ಮೂಡಿ ಬಂದಿದ್ದು ಮಾತ್ರವಲ್ಲದೆ ಬಹುಕಾಲ ಎಲ್ಲರ ನೆನಪಿನಲ್ಲಿ ಉಳಿಯಿತು. ಇದರ ಜೊತೆಗೆ ಕಿರುತೆರೆ ಕಲಾವಿದರ ಸಂಘದವರು ಪ್ರಸ್ತುತ ಪಡಿಸಿದ ಜಾನಪದ ಸೊಗಡಿನ ಹಾಡು, ನೃತ್ಯ ಕೂಡ ದೇಸಿ ಪರಂಪರೆಯನ್ನು ಬಿಂಬಿಸಿ ಎಲ್ಲರ ಮೆಚ್ಚಿಗೆಗೂ ಪಾತ್ರವಾಯಿತು.
ಮುಖ್ಯಮಂತ್ರಿಗಳು ಸಮಾರಂಭಕ್ಕೆ ಆಗಮಿಸಿದಾಗ ನೃತ್ಯ ಕಾರ್ಯಕ್ರಮ ಆರಂಭವಾಗಿತ್ತು. ಸಮಾರಂಭಕ್ಕೆ ಮುಖ್ಯ ಅತಿಥಿ ಸೋನು ನಿಗಮ್ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮಾರ್ಗದ ಮೂಲಕ ಬರಬೇಕಿತ್ತು. ಮುಖ್ಯಮಂತ್ರಿಗಳು ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಕುಳಿತರು. ಅವರ ಕಾರ್ಯ ಒತ್ತಡಗಳನ್ನು ನಾನು ಗಮನದಲ್ಲಿರಿಸಿ ‘ನೃತ್ಯ ರೂಪಕವನ್ನು ಮೊಟಕುಗೊಳಿಸಿ ಉದ್ಘಾಟನಾ ಸಮಾರಂಭ ಆರಂಭಿಸೋಣವೇ’ ಎಂದು ಕೇಳಿದೆ. ಅದಕ್ಕೆ ಮುಖ್ಯಮಂತ್ರಿಗಳು ‘ಬೇಡ..ನೃತ್ಯರೂಪಕ ಮುಂದುವರೆಯಲಿ. ನಾನು ನೋಡುತ್ತೇನೆ. ನಂತರವೇ ಉದ್ಘಾಟನಾ ಸಮಾರಂಭವು ನಡೆಯಲಿ’ ಎಂದು ಹೇಳಿದರು. ಅಷ್ಟೇ ಅಲ್ಲ… ಈ ಮಾತಿನಂತೆ ಕೊನೆಯವರೆಗೂ ಕುಳಿತು ನೋಡಿದರು. ಅಷ್ಟೇ ಅಲ್ಲ ಮುಕ್ತಾಯವಾದ ಮೇಲೆ ಕೈಸವರಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಇದು ಒಂದು ರೀತಿಯಲ್ಲಿ ನನಗೆ ಮತ್ತು ನಮ್ಮಅಕಾಡೆಮಿ ತಂಡಕ್ಕೆ ದೊರಕಿದ ಸರ್ಟಿಫಿಕೇಟ್ ಎಂದೇ ಭಾವಿಸುತ್ತೇನೆ.

ಕರ್ನಾಟಕ ಸರ್ಕಾರವು ಚಲನಚಿತ್ರೋದ್ಯಮದ ಕಲಾವಿದರು ತಂತ್ರಜ್ಞರು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಹತ್ತು ಕೋಟಿ ರೂಪಾಯಿಗಳ ಮೂಲಧನವನ್ನು ‘ಚಲನಚಿತ್ರೋದ್ಯಮ ಕ್ಷೇಮನಿಧಿ’ಯಾಗಿಸಿ ೨೦೧೧ರ ಫೆಬ್ರವರಿ ೧೧ರ ಸರ್ಕಾರಿ ಆದೇಶದಂತೆ ಸ್ಥಾಪಿಸಿ ಈ ದತ್ತಿ ನಿಧಿಯ ಉಸ್ತುವಾರಿಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ವಹಿಸಿತು. ಈ ಯೋಜನೆಸದುದ್ದೇಶದಿಂದ ಕೂಡಿದ್ದರೂ ಹಲವಾರು ತಾಂತ್ರಿಕ ಸಮಸ್ಯೆಗಳಿಂದ ಅಗತ್ಯವಿದ್ದವರು ಇದರ ಸಹಾಯವನ್ನು ಪಡೆದುಕೊಳ್ಳಲು ಆಗುತ್ತಿರಲಿಲ್ಲ. ಇದರ ಸದುಪಯೋಗವಾಗಬೇಕು ಎಂದು ನಿರ್ಧರಿಸಿದ ನಾವು ೨೦೨೦ರ ಜೂನ್ ೧೯ರಂದು ‘ಚಲನಚಿತ್ರೋದ್ಯಮ ಕ್ಷೇಮನಿಧಿ’ಯ ಆಡಳಿತ ಮಂಡಳಿ ಸಭೆಯನ್ನು ನಡೆಸಿ ಕೆಲವು ಅಗತ್ಯವಾದ ತಿದ್ದುಪಡಿಗಳನ್ನು ಮಾಡಿದೆವು.
ಮೊದಲಿಗೆ ಈ ನಿಧಿಯ ವ್ಯಾಪ್ತಿಗೆ ಯಾರು ಬರುತ್ತಾರೆ ಎನ್ನುವುದರ ಕುರಿತು ಸ್ಪಷ್ಟತೆ ತಂದೆವು. ಕರ್ನಾಟಕ ರಾಜ್ಯದಲ್ಲಿ ನೋಂದಣಿಯಾಗಿರುವ ಸಂಘಗಳೆಲ್ಲವೂ ಇದರ ಪ್ರಯೋಜನವನ್ನು ಪಡೆಯಬೇಕು ಎಂದು ನಿರ್ಧರಿಸಿದೆವು. ಬಹಳ ಮುಖ್ಯವಾಗಿ ‘ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ’ ಇದರಲ್ಲಿ ಬಿಟ್ಟು ಹೋಗಿತ್ತು. ಈ ಸಹಾಯ ನಿಧಿಯ ಅಗತ್ಯವಿದ್ದವರು ಬಹುಮಟ್ಟಿಗೆ ಕಲಾವಿದರೇ ಆಗಿದ್ದರು. ಇದರಂತೆ ಕರ್ನಾಟಕ ಕಲಾವಿದರು ಹಾಗೂ ಚಲನಚಿತ್ರ ಕಾರ್ಮಿಕರ ಒಕ್ಕೂಟ ಇದರಲ್ಲಿ ಇರುವ ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರು, ನೃತ್ಯ ಕಲಾವಿದರು, ಕರ್ನಾಟಕ ಚಲನಚಿತ್ರ ಜಾಹೀರಾತು ನೌಕರರು, ಸಿನಿ ಸೌಂಡ್ ಇಂಜಿನಿಯರ್‌ಗಳು, ಸಹ ಕಲಾವಿದರು ಇಂಜಿನಿಯರ್‌ಗಳು, ಸಹ ಕಲಾವಿದರು ಇವರ ಸಂಘಟನೆಗಳನ್ನೂ ಈ ಯೋಜನೆಯಲ್ಲಿ ಸೇರಿಸಲಾಯಿತು. ಇದರ ಜೊತೆಗೆ ಚಲನಚಿತ್ರೋದ್ಯಮ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊAಡು ಕನಿಷ್ಟ ೨೦೦ ಸದಸ್ಯರನ್ನು ಹೊಂದಿ ನಿಯಮಾವಳಿ(ಬೈಲಾ) ವನ್ನು ರೂಪಿಸಿಕೊಂಡಿರುವ ಕರ್ನಾಟಕ ಚಲನಚಿತ್ರ ಕ್ಷೇತ್ರದ ಯಾವುದೇ ಸಂಘದ ಸದಸ್ಯರು ಈ ಸೌಲಭ್ಯ ಪಡೆಯಬಹುದು ಎನ್ನುವ ಅವಕಾಶವನ್ನು ಮಾಡಿಕೊಡಲಾಯಿತು. ಈ ಮೊದಲಿನ ನಿಯಮಾವಳಿಗಳಲ್ಲಿ ಕನಿಷ್ಟ ಹತ್ತು ಅವಕಾಶವನ್ನು ಮಾಡಿಕೊಡಲಾಯಿತು. ಈ ಮೊದಲಿನ ನಿಯಮಾವಳಿಗಳಲ್ಲಿ ಕನಿಷ್ಟ ಹತ್ತು ವರ್ಷ ಸದಸ್ಯತ್ವ ಹೊಂದಿದವರು ಆರ್ಥಿಕ ನೆರವು ಪಡೆಯಲು ಅರ್ಹರಾಗಿದ್ದರು. ಈ ನಿಯಮವು ಮೇಲ್ನೋಟಕ್ಕೇ ಕಠಿಣವಾಗಿದ್ದು ಬಹುತೇಕರು ಇದರ ಪ್ರಯೋಜನದಿಂದ ವಂಚಿತರಾಗಲು ಕಾರಣವಾಗಿತ್ತು. ಇದಕ್ಕಾಗಿ ಇದರ ವ್ಯಾಪ್ತಿಯನ್ನು ೨ ವರ್ಷಗಳಿಗೆ ಇಳಿಸಲಾಯಿತು. ಸಹಾಯ ಪಡೆಯುವವರ ವರಮಾನ ಕೂಡ ವಾರ್ಷಿಕ ಒಂದು ಲಕ್ಷ ಮೀರಿರಬಾರದು ಎಂದು ಇತ್ತು. ಇಂದಿನ ದುಡಿಯುವ ವರ್ಗದ ಸ್ಥಿತಿಗತಿಗಳನ್ನು ಗಮನದಲ್ಲಿರಿಸಿಕೊಂಡು ಇದನ್ನು ಐದು ಲಕ್ಷಕ್ಕೆ ಹೆಚ್ಚಿಸಲಾಯಿತು. ಕುಟುಂಬದ ವ್ಯಾಖ್ಯಾನವನ್ನು ಕೂಡ ಬದಲಾಯಿಸಲಾಯಿತು. ಕಲಾವಿದರ ಮನೆಯಲ್ಲಿ ಬೇರೆ ಯಾರೂ ದುಡಿಯುವವರು ಇರಬಾರದು ಎನ್ನುವುದು ಯೋಜನೆಯ ಮೂಲ ಉದ್ದೇಶಕ್ಕೇ ಭಂಗ ತರುತ್ತದೆ ಎನ್ನುವುದನ್ನು ಗಮನದಲ್ಲಿ ಇರಿಸಿ ಈ ನಿಯಮಾವಳಿಯನ್ನು ತೆಗೆಯಲಾಯಿತು. ಹೀಗೆ ಹಲವು ಬದಲಾವಣೆಗಳ ಮೂಲಕ ಇಡೀ ಯೋಜನೆಯನ್ನು ಅಗತ್ಯವಿದ್ದವರಿಗೆ ಹೀಗೆ ಹಲವು ಬದಲಾವಣೆಗಳ ಮೂಲಕ ಇಡೀ ಯೋಜನೆಯನ್ನು ಅಗತ್ಯವಿದ್ದವರಿಗೆ ಸುಲಭವಾಗಿ ಲಭಿಸುವಂತೆ ಮಾಡಲಾಯಿತು. ಈ ಯೋಜನೆಯ ಕುರಿತು ಇದನ್ನು ಪಡೆದು ಕೊಳ್ಳುವುದರ ಕುರಿತು ಚಿತ್ರರಂಗದಲ್ಲಿ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಇದರ ಕುರಿತು ಎಲ್ಲರಿಗೂ ತಿಳುವಳಿಕೆ ಮೂಡಿಸಿ ಅದರ ಲಾಭ ಪಡೆದುಕೊಳ್ಳುವಂತೆ ಮಾಡಲಾಯಿತು. ಇದರಿಂದ ಆದ ಬದಲಾವಣೆ ಎಂದರೆ ಹಿಂದಿನ ಎಂಟು ವರ್ಷಗಳಲ್ಲಿ ಕೇವಲ ೧೧ ಜನ ಇದರ ಪ್ರಯೋಜನ ಪಡೆದುಕೊಂಡಿದ್ದರೆ, ಈ ಎಲ್ಲಾ ತಿದ್ದುಪಡಿಗಳು ಆದ ನಂತರ ೫೬ ಜನ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಮೂಲಕ ಯೋಜನೆ ಯಶಸ್ವಿಯಾಗುವಂತೆ ಆಗಿದ್ದು ಪಡೆದುಕೊಂಡಿದ್ದಾರೆ. ಈ ಮೂಲಕ ಯೋಜನೆ ಯಶಸ್ವಿಯಾಗುವಂತೆ ಆಗಿದ್ದು ವೈಯಕ್ತಿಕವಾಗಿ ನನಗೂ ಸಂತೋಷ ಕೊಟ್ಟಿದೆ. ಇದೊಂದು ಐತಿಹಾಸಿಕ ಬದಲಾವಣೆ ಎನ್ನುವ ಮಾತು ಎಲ್ಲಾ ವಲಯಗಳಿಂದಲೂ ಸ್ವಯಂ ಪ್ರೇರಿತವಾಗಿ ಕೇಳಿ ಬಂದಿದೆ.

ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಅಂತರರಾಷ್ಟಿಯ ಚಿತ್ರೋತ್ಸವವು ಪ್ರತಿಷ್ಠಿತ ಚಿತ್ರೋತ್ಸವಗಳ ಪಟ್ಟಿಗೆ ಸೇರಿದೆ. ಇದಕ್ಕೆ ಜಾಗತಿಕ ಮನ್ನಣೆಗಾಗಿ ಸತತ ಸಂಪರ್ಕವನ್ನು ನಾನು ಬೆಲ್ಜಿಯಂನಲ್ಲಿ ಇರುವ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಪ್ರೊಡ್ಯೂರ‍್ಸ ಅಸೋಸಿಯೇಷನ್  ಜೊತೆಗೆ ಸಂಪರ್ಕವನ್ನು ಸಾಧಿಸಿಕೊಂಡೇ ಬಂದಿದ್ದೆ. ಇದರ ಕಾರ್ಯದರ್ಶಿಗಳನ್ನು ೧೨ನೇ ಚಿತ್ರೋತ್ಸವದ ಸಂದರ್ಭದಲ್ಲಿ ಕರೆಸಿ ನಮ್ಮ ಚಟುವಟಿಕೆಗಳ ಸಂಪೂರ್ಣ ದರ್ಶನ ಮಾಡಿಸಿದ್ದೆ. ಇದೆಲ್ಲದರ ಪರಿಣಾಮವಾಗಿ ಕೊನೆಗೆ ಈ ನಮಗೆ ಮಾನ್ಯತೆಯನ್ನು ಖಚಿತಪಡಿಸಿತು. ಇದು ನನ್ನ ಅವಧಿಯಲ್ಲಿ ನಡೆದ ಮಹತ್ತರವಾದ ಸಾಧನೆ ಎಂದು ಭಾವಿಸುತ್ತೇನೆ. ಇದರಿಂದ ನಮ್ಮ ಜವಾಬ್ದಾರಿ ಕೂಡ ಹೆಚ್ಚಾಗಿದೆ. ಪ್ರತಿವರ್ಷವೂ ಬಜೆಟ್‌ನಲ್ಲಿ ಚಿತ್ರೋತ್ಸವಕ್ಕಾಗಿ ಒಂದು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುತ್ತದೆ. ಇದು ಚಿತ್ರೋತ್ಸವ ನಡೆಸಲು ಯಾವ ಕೂಡ ಸಾಲದು. ಇದಕ್ಕಾಗಿ ಒಂದು ಶಾಶ್ವತ ನಿಧಿ ರೂಪುಗೊಳ್ಳಬೇಕು. ಪ್ರತಿ ಸಲವೂ ಮತ್ತೆ ಮತ್ತೆ ಅನುದಾನಕ್ಕಾಗಿ ಕೇಳಿಕೊಳ್ಳುವ ಸ್ಥಿತಿ ಬರಬಾರದು. ಇನ್ನೊಂದು ಮಹತ್ವದ ಸಂಗತಿ ಎಂದರೆ ಅಂತರರಾಷ್ಟಿಯ ಚಿತ್ರೋತ್ಸವ ವರ್ಷದ ಯಾವುದೋ ಒಂದು ತಿಂಗಳಲ್ಲಿ ನಡೆದರೂ ಕೂಡ ಅದಕ್ಕಾಗಿ ಇಡೀ ವರ್ಷದ ಚಟುವಟಿಕೆ ನಡೆಯಬೇಕು. ಒಂದು ಚಿತ್ರೋತ್ಸವ ಮುಗಿಯುತ್ತಿದ್ದಂತೆ ಮುಂದಿನ ಚಿತ್ರೋತ್ಸವದ ಸಿದ್ದತೆಗಳು ಆರಂಭವಾಗಬೇಕು. ಇದು ನಿರಂತರ ಪ್ರಕ್ರಿಯೆ. ಅದು ನಮ್ಮಲ್ಲಿ ಸಾಧ್ಯವಾಗಬೇಕಾದರೆ ಚಿತ್ರೋತ್ಸವಕ್ಕಾಗಿಯೇ ಒಂದು ಸುಸಜ್ಜಿತ ತಂಡ ಇರಬೇಕು. ಚಿತ್ರೋತ್ಸವಕ್ಕಾಗಿಯೇ ಅಕಾಡೆಮಿಯ ಒಂದು ಭಾಗ ಸತತವಾಗಿ ಕೆಲಸ ಮಾಡುತ್ತಲೇ ಇರಬೇಕು. ಇದನ್ನು ಸಾಧಿಸುವುದು ನಮ್ಮ ಮುಖ್ಯವಾದ ಉದ್ದೇಶವಾಗಿದೆ.

ಎಲ್ಲಾ ಪೂರ್ವ ಸಿದ್ದತೆ ಮತ್ತು ಮುಂಜಾಗ್ರತೆಯ ಹೊರತಾಗಿಯೂ ಎಲ್ಲರ ನಿರೀಕ್ಷೆಯನ್ನು ಮೀರಿ ಕರೋನಾದ ಎರಡನೇ ಅಲೆ ದೇಶವನ್ನು ಅಪ್ಪಳಿಸಿತು. ಮತ್ತೊಮ್ಮೆ ಲಾಕ್ ಡೌನ್ ಘೋಷಿಸುವುದು ಅನಿವಾರ್ಯವಾಯಿತು. ಇದರಿಂದ ಚಿತ್ರ ಪ್ರದರ್ಶನ, ಚಿತ್ರೀಕರಣ ಸೇರಿದಂತೆ ಎಲ್ಲಾ ಚಟುವಟಿಕೆಗಳೂ ಸ್ಥಗಿತಗೊಂಡು ಕಲಾವಿದರು, ತಂತ್ರಜ್ಞರು ಜೀವನ ಸಾಗಿಸುವುದೇ ಕಷ್ಟವಾಯಿತು. ಈಗ ತಾನೆ ಹಳಿಗೆ ಬರುತ್ತಿದ್ದ ಜೀವನ ಮತ್ತೆ ಸಂಕಷ್ಟಕ್ಕೆ ಈಡಾಯಿತು. ಇಂತಹ ಸಂದರ್ಭದಲ್ಲಿ ಚಿತ್ರರಂಗಕ್ಕೆ ವಿಶೇಷವಾದ ಪ್ಯಾಕೇಜ್ ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರಾಕ್‌ಲೈನ್ ಅವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿ ಮನವಿ ಸಲ್ಲಿಸಿದೆವು. ಮೊದಲ ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸುಮಾರು ಆರು ಸಾವಿರ ಕುಟುಂಬಗಳಿಗೆ ತಲಾ ರೂ. ೩,೦೦೦ ಮೌಲ್ಯದ ದಿನಸಿ ಪಡಿತರ ಖರೀದಿಸಲು ರಿಲಿಯನ್ಸ್ ಮಾರ್ಟ್ ಕೂಪನ್ ನೀಡಿದ್ದನ್ನು ಕೃತಜ್ಞತೆಯಿಂದ ಸ್ಮರಿಸಿ ಕನಿಷ್ಠ ತಲಾ ಐದು ಸಾವಿರ ರೂಪಾಯಿಗಳ ಮೌಲ್ಯದ ಆಹಾರ ಪಡಿತರ ಕೂಪನ್ ಮತ್ತು ಇತರ ನೆರವನ್ನು ನೀಡಿದರೆ ಆಸರೆಯಾಗುತ್ತದೆ ಎಂದು ವಿನಂತಿಸಿಕೊಳ್ಳಲಾಯಿತು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ೬.೨೩ ಕೋಟಿ ರೂಪಾಯಿಗಳ ಸಹಾಯಧನವನ್ನು ಪ್ರಕಟಿಸಿದರು. ಇದಕ್ಕಾಗಿ ಸೇವಾ ಸಿಂಧು ಪೋರ್ಟೆಲ್ ಮೂಲಕ ಅರ್ಜಿ ಆಹ್ವಾನಿಸಿ ಕಲಾವಿದರ ದಾಖಲೆಗಳನ್ನು ಪರಿಶೀಲಿಸಿ ಅತ್ಯಂತ ಪಾರದರ್ಶಕವಾಗಿ ನೆರವನ್ನು ಮಂಜೂರಾತಿ ಮಾಡಲು ಕ್ರಮ ಕೈಗೊಂಡೆವು. ಫಲಾನುಭವಿಗಳು ಡಿ.ಬಿ.ಟಿ ಆಪ್ ಮೂಲಕ ತಮ್ಮ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ನೆರವು ವರ್ಗಾವಣೆ ಆಗಿರುವುದನ್ನು ಖಚಿತ ಪಡಿಸಿಕೊಳ್ಳುವ ಅವಕಾಶವೂ ಇದರಿಂದ ಲಭಿಸಿತು. ಈ ಮಹತ್ತರ ಕಾರ್ಯದಲ್ಲಿ ನಮಗೆ ನೆರವು ಮತ್ತು ಬೆಂಬಲವನ್ನು ನೀಡಿದ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್, ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ಸಿನಿಮಾಕ್ಕೆ ಸಂಬoಧಿಸಿದ ಎಲ್ಲಾ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ನಾನು ಕೃತಜ್ಞನಾಗಿದ್ದೇನೆ.
ಮುಂದೆಯೂ ಇಂತಹ ಸಮಸ್ಯೆಗಳು ಸಂಭವಿಸುವುದು ಸಾಧ್ಯವಿದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಸಂಯೋಜಿತ ಕ್ರಮವನ್ನು ಕೈಗೊಳ್ಳಬೇಕು ಎನ್ನುವ ಚಿಂತನೆ ಈ ಸಂದರ್ಭದಲ್ಲಿ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡಿದೆ. ಆ ಕುರಿತು ಸೂಕ್ತ ಯೋಜನೆಯೊಂದನ್ನು ಯೋಚಿಸಲಾಗುತ್ತಿದೆ. ಚಿತ್ರರಂಗಕ್ಕೆ ಸಂಬಧಪಟ್ಟ ಎಲ್ಲ ಸದಸ್ಯರ ಮಾಹಿತಿಯನ್ನೂ ಒಂದೆಡೆ ಕಲೆಹಾಕುವುದು. ಅದು ಕೇವಲ ಅಕಾಡೆಮಿಯ ಕೆಲಸಕ್ಕೆ ಅಥವಾ ಕಷ್ಟಕಾಲದಲ್ಲಿ ನೆರವು ನೀಡುವ ಯೋಜನೆಗೆ ಮಾತ್ರ ಉಪಯೋಗಕ್ಕೆ ಬರದೆ ಸದಾಕಾಲದಲ್ಲಿಯೂ ಕ್ರೀಯಾಶೀಲವಾಗಿರುವಂತೆ ಮತ್ತು ಚಿತ್ರರಂಗದ ಪ್ರತಿಯೊಬ್ಬ ಸದಸ್ಯರಿಗೂ ಸರ್ಕಾರದ ಅಥವಾ ಸಂಘಸoಸ್ಥೆಗಳ ಅಥವಾ ಅಕಾಡೆಮಿಗಳ ಯೋಜನೆಗಳು ನೆರವುಗಳು ಮಾಹಿತಿ ಎಲ್ಲವೂ ಒಂದೇ ಕಡೆ ದೊರಕುವ ಹಾಗೆ ಮಾಡಬೇಕೆಂಬ ಸಂಕಲ್ಪ ಇದೆ. ಇದರ ಬಗ್ಗೆ ಅತಿ ಶೀಘ್ರದಲ್ಲಿಯೇ ಒಂದು ಖಚಿತ ಯೋಜನೆ ರೂಪಿಸಲಾಗುವುದು.

‘ಬೆಳ್ಳಿ ಮಂಡಲ’ ಮತ್ತು ‘ಬೆಳ್ಳಿ ಹೆಜ್ಜೆ’ ಆರಂಭದ ದಿನದಿಂದಲೂ ಚಲನಚಿತ್ರ ಅಕಾಡೆಮಿಯ ಪ್ರತಿಷ್ಠಿತ ಯೋಜನೆಗಳಾಗಿವೆ. ಇದಕ್ಕೆ ಹೊಸ ಸ್ವರೂಪ ನೀಡಿ ಮುಂದುವರೆಸುವುದು ನನ್ನ ಉದ್ದೇಶ. ‘ಬೆಳ್ಳಿಮಂಡಲ’ಗಳು ರಾಜ್ಯದೆಲ್ಲೆಡೆ ಸಕ್ರಿಯರಾಗುವುದರ ಜೊತೆಗೆ ಅಕಾಡೆಮಿಯ ಉದ್ದೇಶಿತ ಚಿತ್ರೋತ್ಸಗಳನ್ನು ಬೇರೆ ಬೇರೆ ಭಾಗದವರಿಗೆ ತಲುಪಿಸುವುದು, ‘ಬೆಳ್ಳಿ ಹೆಜ್ಜೆ’ ಯನ್ನು ಚಿತ್ರರಂಗದ ತೆರೆಯ ಹಿಂದಿನ ಕಲಾವಿದರಿಗೂ ವಿಸ್ತರಿಸಿ ಅವರ ಅನುಭವಗಳನ್ನೂ ಕೂಡ ದಾಖಲೆ ಆಗುವಂತೆ ಮಾಡುವುದು ಮತ್ತು ಇದುವರೆಗೂ ಆಗಿರುವ ಬೆಳ್ಳಿಹೆಜ್ಜೆಯ ದಾಖಲಾತಿಗಳೆಲ್ಲವನ್ನೂ ಪುಸ್ತಕರೂಪದಲ್ಲಿ ಪ್ರಕಟಿಸುವುದು ಮತ್ತು ಚಿತ್ರರಂಗದ ದಾಖಲಾತಿಗಳನ್ನು ಚಿತ್ರಭಂಡಾರದ ರೂಪದಲ್ಲಿ ವಿಸ್ತರಿಸುವುದು ನಮ್ಮ ನೀಲಿ ನಕ್ಷೆಯಲ್ಲಿ ಇವೆ. ಈ ನಿಟ್ಟಿನಲ್ಲಿ ತಜ್ಞರ ಸಂಚಾಲನ ಸಮಿತಿ ರಚನೆಯಾಗಿದ್ದು ಹೊಸ ಯೋಜನೆ ಮತ್ತು ಯೋಚನೆಯೊಂದಿಗೆ ಇದು ಮುಂದುವರೆಯಲಿದೆ. ಇದಕ್ಕಾಗಿ ಐದು ಪ್ರಮುಖ ಸ್ಥಳಗಳನ್ನು ಗುರುತಿಸಲಾಗುವುದು. ಈ ಕಾರ್ಯಕ್ರಮಕ್ಕಾಗಿ ರಾಜ್ಯವಾರು ಮತ್ತು ಜಿಲ್ಲಾವಾರು ಸಂಚಾಲಕರು ಮತ್ತು ಸಹ ಸಂಚಾಲಕರನ್ನು ನೇಮಿಸಲಾಗುತ್ತದೆ. ಈ ಮೂಲಕ ಇಡೀ ಯೋಜನೆ ವಿಭಿನ್ನವಾಗಿ ಮತ್ತು ರಾಜ್ಯವ್ಯಾಪಿ ವಿಸ್ತಾರವನ್ನು ಹೊಂದಲಿದೆ.

ಅನೇಕ ಯುವಜನರು ಸಿನಿಮಾ ಕುರಿತ ಆಸಕ್ತಿಯಿಂದ ಬೆಂಗಳೂರಿಗೆ ಬರುತ್ತಾರೆ. ಆದರೆ ಅವರಿಗೆ ತರಬೇತಿಯನ್ನ ಪಡೆಯಲು ಇಲ್ಲಿನ ಖಾಸಗಿ ಸಂಸ್ಥೆಗಳ ದುಬಾರಿ ಶುಲ್ಕ ಅಡ್ಡಿಯನ್ನು ಉಂಟು ಮಾಡುತ್ತವೆ. ಹೀಗಾಗಿ ಅವರು ಆಸಕ್ತಿ ಇದ್ದರೂ ಬದುಕನ್ನು ಕಟ್ಟಿ ಕೊಳ್ಳಲು ಬಹಳ ಕಷ್ಟವನ್ನು ಪಡಬೇಕಾಗುತ್ತದೆ. ಹೀಗೆ ಅವಕಾಶವಂಚಿತರಾದವರಿಗೆ ಅಕಾಡೆಮಿಯಿಂದ ತರಬೇತಿ ಕೊಡಿಸುವ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ಪ್ರತಿಭಾವಂತರಿಗೆ ಸೂಕ್ತ ಅವಕಾಶ ದೊರೆತು ಅವರ ಪ್ರತಿಭೆ ಬೆಳಕಿಗೆ ಬರಲಿದೆ. ಇದಕ್ಕಾಗಿ ಬೋಧನಾ ಕ್ರಮವನ್ನು ಮತ್ತು ಅದಕ್ಕೆ ಬೇಕಾದ ಪರಿಣಿತರ ಪಟ್ಟಿಯನ್ನು ಅಕಾಡೆಮಿ ಸಿದ್ದಗೊಳಿಸುತ್ತಾ ಇದೆ. ಯುವಜನತೆಯಲ್ಲಿ ಚಲನಚಿತ್ರ ರಸಗ್ರಹಣ ಮತ್ತು ಚಲನಚಿತ್ರ ನಿರ್ಮಾಣದ ಕುರಿತ ಕೋರ್ಸ್ಗಳನ್ನು ರೂಪಿಸುವ ಉದ್ದೇಶವಿದೆ.

ಚಿತ್ರರಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ತೀರಾ ಕಡಿಮೆ ಇದೆ. ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ ಬಹಳಷ್ಟ್ಟು ಮಹಿಳೆಯರು ಇದ್ದರೂ ತಂತ್ರಜ್ಞರಾಗಿ ಬಹಳ ಕಡಿಮೆ ಜನ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಮೊದಲಿನಿಂದಲೂ ಈ ರಂಗದಲ್ಲಿ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರು ಆಸಕ್ತಿ ತೋರಿಸಿದ್ದು ಕಡಿಮೆಯೇ. ಅದರೆ ಈಗ ಜಾಗತಿಕವಾಗಿ ಮಹಿಳೆಯರು ಎಲ್ಲ ರಂಗದಲ್ಲೂ ಮೇಲುಗೈ ಸಾಧಿಸಿದ್ದಾರೆ. ಬೇರೆ ಭಾಷೆಗಳ ಚಲನಚಿತ್ರಗಳಲ್ಲಿ ಮಹಿಳೆಯರು ತಕ್ಕಮಟ್ಟಿಗೆ ಪ್ರಭುತ್ವವನ್ನೇ ಸಾಧಿಸಿದ್ದಾರೆ ಎನ್ನಬಹುದು. ಆದರೆ ನಮ್ಮಲ್ಲಿ ಮಹಿಳೆಯರಿಗೆ ಪ್ರೋತ್ಸಾಹದ ಕೊರತೆ ಇದೆ. ಇದು ಬಹುತೇಕವಾಗಿ ಪುರುಷಪ್ರಧಾನ ಚಿತ್ರಗಳೇ ಮುನ್ನಲೆಗೆ ಬರುವಂತಾಗಿದೆ. ಮಹಿಳಾ ಸಂವೇದನಾ ಚಿತ್ರಗಳು ಮಹಿಳೆಯರ ಮೂಲಕವೇ ಅಭಿವ್ಯಕ್ತಿಗೊಂಡಾಗ ಅದು ಹೆಚ್ಚು ಪರಿಣಾಮಕಾರಿಯಾಗಿಯೂ ಪ್ರಸ್ತುತವೂ ಆಗಿರುತ್ತದೆ. ಈ ಎಲ್ಲ ಕಾರಣದಿಂದ ಅವರನ್ನು ಪ್ರೋತ್ಸಾಹ ಮಾಡಲು ವಿಶೇಷ ಕೋರ್ಸ್ ರೂಪಿಸುವ ಉದ್ದೇಶವಿದೆ. ಮಹಿಳೆಯರು ಈ ರಂಗದಲ್ಲಿ ಹೆಚ್ಚು ಸಕ್ರಿಯವಾಗುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ಮೇಲೆ ಇದೆ. ಇದರ ಜೊತೆಗೆ ನಟನಾ ಕ್ಷೇತ್ರದಲ್ಲಿ ಕೂಡ ನಗರ ಪ್ರದೇಶದವರೇ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶವನ್ನು ಹೆಚ್ಚು ಮಾಡಬೇಕಾಗಿದೆ. ಇದೊಂದು ಅತ್ಯಂತ ಪರಿಣಾಮಕಾರಿಯಾದ ಮತ್ತು ಚಲನಚಿತ್ರರಂಗಕ್ಕೆ ಸಶಕ್ತ ಮಹಿಳಾ ತಂತ್ರಜ್ಞರನ್ನು ನೀಡುವ ದೂರಗಾಮಿ ಯೋಜನೆಯಾಗಿದೆ. ಅದಕ್ಕಾಗಿ ನಟನೆ ಮತ್ತು ತಾಂತ್ರಿಕ ಕೌಶಲ್ಯದ ತರಬೇತಿಯನ್ನು ನೀಡುವ ನಕ್ಷೆೆಯನ್ನು ರೂಪಿಸಲಾಗಿದೆ. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬ ಮಹಾಕವಿ ಕುವೆಂಪು ಅವರ ಆಶಯದಂತೆ ಮಹಿಳೆಯರಿಗೆ ಕೂಡ ಸಮಾನ ಅವಕಾಶವನ್ನು ನಾವು ಒದಗಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯಪ್ರವೃತ್ರವಾಗಲಿದೆ.

en_USEnglish