Karnataka Chalanachitra Academy

Home → About us → Future Plans

ನಮ್ಮ ಭವಿಷ್ಯದ ಯೋಜನೆಗಳು

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸ್ಥಾಪನೆಯ ಬಹಳ ಮುಖ್ಯವಾದ ಉದ್ದೇಶಗಳಲ್ಲಿ ಚಲನಚಿತ್ರ ಭಂಡಾರದ ಸ್ಥಾಪನೆ ಕೂಡ ಹೌದು. ಕನ್ನಡ ಚಿತ್ರರಂಗ ಈಗ ೮೭ ವರ್ಷಗಳ ಚಲನಚಿತ್ರ ಭಂಡಾರದ ಸ್ಥಾಪನೆ ಕೂಡ ಹೌದು. ಕನ್ನಡ ಚಿತ್ರರಂಗ ಈಗ ೮೭ ವರ್ಷಗಳ ಪಯಣವನ್ನು ಮುಗಿಸಿದೆ. ಹಿಂದಿನ ಮೂಕಿ ಚಿತ್ರಗಳ ಪರಂಪರೆ ಕೂಡ ಸೇರಿದರೆ ಸರಿಸುಮಾರು ನೂರು ವರ್ಷಗಳ ಇತಿಹಾಸ ಕನ್ನಡ ಚಿತ್ರರಂಗಕ್ಕೆ ಇದೆ. ಈ ಯಾನದ ಅಮೂಲ್ಯ ದಾಖಲೆಗಳು ಹಂಚಿ ಹೋಗಿದ್ದು ಅದನ್ನು ಸಂಗ್ರಹಿಸುವುದು ಈಗಿನ ತುರ್ತು ಅಗತ್ಯವಾಗಿದೆ. ಆರಂಭಿಕ ಚಲನಚಿತ್ರಗಳಾದ ಸತಿ ಸುಲೋಚನ, ಭಕ್ತ ಧ್ರುವ, ಸದಾರಮೆ, ಸಂಸಾರ ನೌಕ ಮೊದಲಾದವುಗಳ ಪ್ರತಿಗಳು ಈಗ ಲಭ್ಯವಿಲ್ಲ. ಆದರೆ ಇದಕ್ಕೆ ಸಂಬoಧಿಸಿದ ಛಾಯಾಚಿತ್ರಗಳು, ಗ್ರಾಮಾಪೋನ್ ಪ್ಲೇಟ್‌ಗಳು, ಪೋಸ್ಟರ್‌ಗಳು ಮೊದಲಾದ ಅನೇಕ ಅಮೂಲ್ಯ ವಸ್ತುಗಳು ಖಾಸಗಿ ವ್ಯಕ್ತಿಗಳ ಬಳಿ ಲಭ್ಯವಿದೆ. ಅವರು ಅದನ್ನು ಜತನವಾಗಿ ಕಾಪಾಡಿಕೊಂಡು ಬಂದಿದ್ದರೂ ಅವರ ಮುಂದಿನ ಪೀಳಿಗೆ ಯವರಿಗೂ ಇದೇ ಉತ್ಸಾಹ ಇಲ್ಲದೆ ಹೋದರೆ ಅವುಗಳು ಶಾಶ್ವತವಾಗಿ ನಾಶವಾಗುವ ಅಪಾಯವಿದೆ. ಅಂತಹ ಅನೇಕ ದಾಖಲೆಗಳನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಆರಂಭಿಕ ಚಿತ್ರಗಳು ರೀಲ್‌ಗಳಲ್ಲಿ ಇದ್ದು ಅವುಗಳನ್ನು ಸೂಕ್ತವಾಗಿ ಸಂರಕ್ಷಿಸಿ ಇಡದೆ ಹೋದರೆ ನಾಶವಾಗುವ ಅಪಾಯವಿದೆ. ಆರಂಭಿಕ ಗ್ರಾಮಾಪೋನ್ ಪ್ಲೇಟ್‌ಗಳು ಅವೆಮಣ್ಣಿನಿಂದ ರೂಪುಗೊಂಡಿದ್ದು ಬಹು ಕಾಳಜಿಯಿಂದ ಗ್ರಾಮಾಪೋನ್ ಪ್ಲೇಟ್‌ಗಳು ಅವೆಮಣ್ಣಿನಿಂದ ರೂಪುಗೊಂಡಿದ್ದು ಬಹು ಕಾಳಜಿಯಿಂದ ಅವುಗಳನ್ನು ಕಾಪಾಡಬೇಕು. ಇವುಗಳು ೮ ಆರ್.ಎಂ.ಪಿ ಮಾದರಿಯಲ್ಲಿ ಇದ್ದು ಇದನ್ನು ಪ್ರಯೋಗಿಸುವ ನೀಡಲ್ ಈಗ ಬಹು ವಿರಳವಾಗಿ ಲಭ್ಯವಿದೆ. ಆ ಕಾಲದ ಛಾಯಾಚಿತ್ರಗಳೂ ಕೂಡ ಶಿಥಿಲ ಸ್ಥಿತಿಯಲ್ಲಿ ಇದೆ. ಇವೆಲ್ಲವನ್ನೂ ಮುಂದಿನ ಪೀಳಿಗೆಗೆ ಉಳಿಸಿ ತಲುಪಿಸುವುದು ನಮ್ಮ ನೈತಿಕ ಹೊಣೆಗಾರಿಕೆ ಆಗಿದೆ. ಆರಂಭಿಕ ದಿನಗಳ ದಾಖಲಾತಿ ಮಾಡಿರುವ ಪತ್ರಿಕೆಗಳು, ಹಾಡಿನ ಪುಸ್ತಕಗಳು ಎಲ್ಲವೂ ಈಗ ಬಹು ಅಮೂಲ್ಯ ಎನ್ನಿಸಿಕೊಂಡಿವೆ. ಇವುಗಳ ಸಂರಕ್ಷಣೆ ಕೂಡ ಅಗತ್ಯವಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅರಂಭದಿoದಲೇ ಚಿತ್ರ ಭಂಡಾರದ ಯೋಜನೆ ರೂಪುಗೊಂಡಿತ್ತು. ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಹಾಯಧನವನ್ನು ಕೂಡ ನೀಡಿತ್ತು. ಆದರೆ ಇಡೀ ಯೋಜನೆ ರೂಪುಗೊಳ್ಳಲು ಕನಿಷ್ಟ ಹತ್ತು ಕೋಟಿ ರೂಪಾಯಿಗಳು ಬೇಕು ಎನ್ನುವ ಅಂದಾಜು ಇರುವುದರಿಂದ ಇದು ಕಾರ್ಯರೂಪಕ್ಕೆ ಬರುವುದು ವಿಳಂಬವಾಯಿತು. ಚಲನಚಿತ್ರ ಅಕಾಡೆಮಿಯ ಹಿಂದಿನ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ, ತಾರಾ ಅನೂರಾಧ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಅವಧಿಯಲ್ಲಿ ಈ ಕುರಿತು ಪ್ರಯತ್ನವನ್ನು ಪಡುತ್ತಲೇ ಬಂದಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಇದಕ್ಕೆ ಸ್ಪಷ್ಟರೂಪ ಬರಬೇಕು ಎಂದು ನಿರ್ಧರಿಸಿದೆ. ಇದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲಿ ಜುಲೈ ೨೦೨೦ರಲ್ಲಿ ಒಂದು ಸಮಿತಿ ರೂಪುಗೊಂಡಿತು. ಬೆಂಗಳೂರು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್, ಇತಿಹಾಸಕಾರ ಸುರೇಶ್ ಮೂನ, ಚಿತ್ರಕಾರ ಅರುಣ್ ಸಾಗರ್, ಸಿನಿಮೋಟೋಗ್ರ‍್ರಾಫರ್ ಅಶೋಕ್ ಕಶ್ಯಪ್, ಹಿರಿಯ ಪತ್ರಕರ್ತ ಮುರುಳಿಧರ ಖಜಾನೆ ಮತ್ತು ರಿಜಿಸ್ಟಾರ್ ಹಿಮಂತ ರಾಜು ಇದರ ಸದಸ್ಯರಾಗಿದ್ದಾರೆ. ಈ ಏಳು ಜನರ ಸಮಿತಿ ಚಲನಚಿತ್ರ ಭಂಡಾರವು ಹೇಗೆ ಇರಬೇಕು ಎನ್ನುವುದರ ಕುರಿತು ವಿವರವಾದ ವರದಿಯನ್ನು ಸಲ್ಲಿಸಿದೆ. ಚಲನಚಿತ್ರ ಭಂಡಾರದ ಜೊತೆಗೆ ಸಿನಿಮಾ ಮ್ಯೂಸಿಯಂ ರೂಪಿಸುವ ಉದ್ದೇಶವೂ ಅಕಾಡೆಮಿಗೆ ಇದೆ. ಈ ಮೂಲಕ ಒಂದು ಪ್ರವಾಸಿ ತಾಣವಾಗಿ ಕೂಡ ಅಕಾಡೆಮಿಯು ತನ್ನ ಸಾಧ್ಯತೆಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಅಗತ್ಯವಾದ ಅಪರೂಪದ ಸಿನಿಮಾಗಳನ್ನು ನೋಡಲು ಸಣ್ಣ ಸ್ಟುಡಿಯೋವನ್ನು ವ್ಯವಸ್ಥೆ ಮಾಡಲಾಗುವುದು. ಪ್ರಮುಖ ಚಿತ್ರಗಳಲ್ಲಿದ್ದ ಪ್ರಾಪರ್ಟಿ ಕಾಸ್ಟ್ಯೂಮ್, ಆರ್.ನಾಗೇಂದ್ರ ರಾವ್, ಹುಣಸೂರು ಕೃಷ್ಣಮೂರ್ತಿ, ಕು.ರ.ಸೀತಾರಾಮ ಶಾಸ್ತ್ರಿ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಗೀತಪ್ರಿಯ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್, ವಿಜಯನಾರಸಿಂಹ, ಹಂಸಲೇಖ ಮೊದಲಾದ ಮಹನೀಯರು ರಚಿಸಿದ ಚಿತ್ರಕಥೆ, ಸಂಭಾಷಣೆ, ಹಾಡುಗಳ ಹಸ್ತಪ್ರತಿ. ಜಿ.ಕೆ.ವೆಂಕಟೇಶ್, ಎಂ.ರoಗರಾವ್, ವಿಜಯಭಾಸ್ಕರ್, ಸತ್ಯಂ, ಉಪೇಂದ್ರ ಕುಮಾರ್ ಮೊದಲಾದವರು ಬಳಸುತ್ತಿದ್ದ ಅಪರೂಪದ ವಾದ್ಯಗಳ ಸಂಗ್ರಹ ಇಂತಹ ಅನೇಕ ಅಪರೂಪದ ಸಂಗತಿಗಳು ಮ್ಯೂಸಿಯಂನಲ್ಲಿ ಇರಲಿವೆ. ಇದರ ಜೊತೆಗೆ ಸಿನಿಮಾ ಅಧ್ಯಯನಕ್ಕೆ ಅಗತ್ಯವಾದ ಲೈಬ್ರರಿ ಕೂಡ ಇಲ್ಲಿ ಇರಲಿದೆ. ಸಿನಿಮಾ ಕುರಿತು ಅಧ್ಯಯನ ಮಾಡುವವರೆಲ್ಲರೂ ಅಗತ್ಯವಾಗಿ ಹುಡುಕಿಕೊಂಡು ಬರಲೇ ಬೇಕಾದ ತಾಣವಾಗಿ ಇದನ್ನು ಬೆಳೆಸುವುದು ನಮ್ಮ ಕನಸು. ಪುಣೆಯಲ್ಲಿರುವ ಭಾರತದ ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ ಮತ್ತು ಮುಂಬೈ ನಲ್ಲಿರುವ ಭಾರತೀಯ ಚಲನಚಿತ್ರಗಳ ರಾಷ್ಟ್ರೀಯ ಸಂಗ್ರಾಹಾಲಯಗಳೆರಡನ್ನು ನಾನು ಮತ್ತು ನಮ್ಮ ತಂಡ ಸಂದರ್ಶಿಸಿ ಬಂದೆವು. ಅಲ್ಲಿಂದ ಪಡೆಯಬೇಕಾದ ಗುಣಾತ್ಮಕ ಅಂಶಗಳನ್ನು ಪಟ್ಟಿ ಮಾಡಿಕೊಂಡಿದ್ದೇವೆ. ಕನ್ನಡ ಚಿತ್ರಗಳ ಮತ್ತು ದಾಖಲಾತಿಯ ಸಂಗ್ರಹಕ್ಕೆ ಅಲ್ಲಿಂದ ಕೂಡ ನೆರವು ದೊರಕುವ ಭರವಸೆ ದೊರಕಿದೆ. ಈಗ ಮುಖ್ಯವಾಗಿ ಆಗ ಬೇಕಾಗಿರುವುದು ಚಲನಚಿತ್ರಗಳ ಪ್ರಿಂಟ್ ಇಲ್ಲವೆ ಬೀಟಾ ಪ್ರತಿಗಳು ಮತ್ತು ಅದಕ್ಕೆ ಸಂಬoಧಿಸಿದ ಗ್ರಾಮಾಪೋನ್ ಪ್ಲೇಟ್‌ಗಳು, ಎಲ್.ಸಿ.ಡಿ, ಸೌಂಡ್ ಟ್ರ್ಯಾಕ್, ಕ್ಯಾಸೆಟ್ ಮೊದಲಾದ ಪೂರಕ ಸಂಗತಿಗಳು, ಪ್ರಚಾರದ ಸ್ಥಿರ ಚಿತ್ರಗಳು, ಹಾಡುಗಳ ಪುಸ್ತಕಗಳು, ಕರಪತ್ರಗಳು, ಆ ಕಾಲದ ಸಿನಿಮಾ ಪತ್ರಿಕೆಗಳು, ವರದಿಗಳು ಹೀಗೆ ಕನ್ನಡ ಚಿತ್ರರಂಗಕ್ಕೆ ಸಂಬಧಿಸಿದ ಎಲ್ಲಾ ಮಾಹಿತಿಯೂ ಒಂದೆಡೆ ಅಚ್ಚುಕಟ್ಟಾಗಿ ಸಿಗಬೇಕು. ನಂತರ ಅದನ್ನು ಡಿಜಿಟೈಸ್ ಮಾಡಿಸಿ ಸಂರಕ್ಷಿಸುವುದರ ಜೊತೆಗೆ ಜನರಿಗೆ ತಲುಪುವಂತೆ ಮಾಡಲು ಪ್ರಯತ್ನಿಸುತ್ತೇವೆ. ಇದು ಮಹತ್ವದ ಯೋಜನೆ ಆಗಿದ್ದು ಇತಿಹಾಸದ ಅರಿವನ್ನು ಹೆಚ್ಚಿಸುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದರ ಜೊತೆಗೆ ಸಂಶೋಧನೆಗಳಿಗೂ ಕೂಡ ಸಾಕಷ್ಟು ಅವಕಾಶವನ್ನು ಕಲ್ಪಿಸುತ್ತದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದ ಕುರಿತು ಆಗಿರುವ ಸಂಶೋಧನೆಗಳು ತೀರಾ ಕಡಿಮೆ, ಅದನ್ನು ಹೆಚ್ಚಿಸುವುದು ಮತ್ತು ಯುವ ಪೀಳಿಗೆಗೆ ನಮ್ಮ ಪರಂಪರೆಯ ಅರಿವನ್ನು ಉಂಟು ಮಾಡುವುದು ಈ ಯೋಜನೆಯ ಮುಖ್ಯವಾದ ಸಂಗತಿಯಾಗಿದೆ. ಇದು ಸಾಧ್ಯವಾದಾಗ ಕನ್ನಡ ಚಿತ್ರರಂಗದ ಕುರಿತ ಅಧ್ಯಯನದಲ್ಲಿ ಬಹಳಮುಖ್ಯವಾದ ಬೆಳವಣಿಗೆ ಉಂಟಾಗುತ್ತದೆ ಎಂದು ನಾನು ವಿಶ್ವಾಸವಿರಿಸಿದ್ದೇನೆ. ಬಿ.ಡಿ.ಎ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಚಲನಚಿತ್ರ ಭಂಡಾರ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ದಿನಾಂಕ ೨೨.೦೬.೨೦೧೧ರಂದು ಅಕಾಡೆಮಿಗೆ ನೀಡಿದೆ. ಈ ಹಣವನ್ನು ನಿಶ್ಚಿತ ಠೇವಣಿಯಲ್ಲಿ ತೊಡಗಿಸಿ ಇದರಿಂದ ಬರುವ ಬಡ್ಡಿ ಹಣದಿಂದ ‘ಚಲನಚಿತ್ರ ಭಂಡಾರ’ ಸ್ಥಾಪನೆ ಹಾಗೂ ನಿರ್ವಹಣೆ ಮಾಡಲು ಬಿ.ಡಿ.ಎ.ಯ ಜೊತೆಗೆ ಕರಾರು ಮಾಡಿಕೊಳ್ಳಲಾಗಿದೆ. ೨೦೨೦-೨೧ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ‘ಚಲನಚಿತ್ರ ಭಂಡಾರ’ ಸ್ಥಾಪನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒಳಗೊಂಡoತೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಐವತ್ತು ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದೆ. ಇದರ ಜೊತೆಗೆ ನಿಗದಿತ ಖಾತೆಯಲ್ಲಿ ಇರುವ ಬಡ್ಡಿಯನ್ನೂ ಸೇರಿಸಿ ಸುಮಾರು ೯೦ ಲಕ್ಷದಿಂದ ೯೫ ಲಕ್ಷಗಳ ವೆಚ್ಚದಲ್ಲಿ ಆರಂಭಿಕ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಇದರಿಂದ ಯೋಜನೆ ಮೊದಲ ಹಂತದ ಚಾಲನೆಯನ್ನು ಶೀಘ್ರವಾಗಿ ಪಡೆಯಲಿದೆ. ಇದರಲ್ಲಿ ಕನ್ನಡ ಮಾತ್ರವಲ್ಲದೆ ಜಾಗತಿಕ ಮನ್ನಣೆ ಪಡೆದಂತಹ ಜಗತ್ತಿನ ಬೇರೆ ಭಾಷೆಯ ಚಿತ್ರಗಳಿಗೂ ಕೂಡ ಅವಕಾಶ ನೀಡುವ ಉದ್ದೇಶವಿದೆ.

ಚಲನಚಿತ್ರ ಅಕಾಡೆಮಿಯಲ್ಲಿ ಒಂದು ಸುಸಜ್ಜಿತ ಗ್ರಂಥಾಲಯವನ್ನು ಸ್ಥಾಪಿಸಿ ಅಲ್ಲಿ ಚಿತ್ರರಂಗಕ್ಕೆ ಸಂಬoಧಿಸಿದ ಕನ್ನಡ, ಭಾರತೀಯ ಭಾಷೆಗಳು ಮತ್ತು ವಿದೇಶದಲ್ಲಿ ಪ್ರಕಟವಾದ ಅಮೂಲ್ಯ ಪುಸ್ತಕಗಳ ಸಂಗ್ರಹ ಇರುವಂತೆ ಪ್ರಯತ್ನಿಸಲಾಗುವುದು, ಈ ಮೂಲಕ ಚಲನಚಿತ್ರ ಕುರಿತು ಅಧ್ಯಯನ ಮಾಡುವವರಿಗೆ ಇದು ಆಸಕ್ತಿಯ ತಾಣವಾಗಲಿದೆ. ಪುಸ್ತಕದಂತೆ ಡಿಜಿಟಲ್ ಮಾಧ್ಯಮದಲ್ಲಿ ಇರುವ ಮಾಹಿತಿಗಳೂ ಕೂಡ ಒಂದೆಡೆ ಸಿಗುವಂತೆ ಮಾಡಲಾಗುವುದು.
ಅಕಾಡೆಮಿಯು ಈಗಾಗಲೇ ಆರಂಭದ ದಿನದಿಂದಲೂ ಪ್ರಕಟಣೆಗಳನ್ನು ಮಾಡುತ್ತಲೇ ಬಂದಿದೆ. ಈ ಕುರಿತು ಇರುವ ಬಹು ದೊಡ್ಡ ಆಕ್ಷೇಪಣೆ ಎಂದರೆ ಅಕಾಡೆಮಿಯ ಬಂದಿದೆ. ಈ ಕುರಿತು ಇರುವ ಬಹು ದೊಡ್ಡ ಆಕ್ಷೇಪಣೆ ಎಂದರೆ ಅಕಾಡೆಮಿಯ ಪುಸ್ತಕಗಳು ಎಲ್ಲೆಡೆ ದೊರಕುತ್ತಿಲ್ಲ ಎನ್ನುವುದಾಗಿದೆ. ಇದನ್ನು ನಿವಾರಿಸಲು ಅಕಾಡೆಮಿಯ ಪುಸ್ತಕಗಳು ಎಲ್ಲೆಡೆ ದೊರಕುವಂತೆ ಮಾಡುವ ಯೋಜನೆಗಳನ್ನು ಕೈಗೊಳ್ಳಲಾಗುವುದು. ಅಕಾಡೆಮಿಯಲ್ಲಿಯೇ ಪುಸ್ತಕ ಮಾರಾಟ ಮಳಿಗೆಯನ್ನು ಸ್ಥಾಪಿಸಿ ಅಗತ್ಯವಿರುವವರು ಇಲ್ಲಿ ಪುಸ್ತಕಗಳನ್ನು ಕೊಳ್ಳುವ ಅವಕಾಶ ಕಲ್ಪಿಸಲಾಗುವುದು.

ಪುಸ್ತಕ ಪ್ರಕಟಣೆ ಅಮೂಲ್ಯವೂ, ನಿರಂತರವೂ ಆಗುವಂತೆ ನೋಡಿಕೊಳ್ಳಲು ಈಗಾಗಲೇ ಒಂದು ಸಮಿತಿಯನ್ನು ಅದಕ್ಕಾಗಿ ರೂಪಿಸಲಾಗಿದೆ. ಈ ಮೂಲಕ ಇನ್ನಷ್ಟು ಮಹತ್ವದ ಪುಸ್ತಕಗಳು ಮೂಡಿ ಬರಲಿವೆ ಎನ್ನುವ ನಂಬಿಕೆ ನಮ್ಮದು.. ಇದನ್ನು ಕನ್ನಡಕ್ಕೆ ಮಾತ್ರ ಸೀಮಿತಗೊಳಿಸದೆ ಸೋದರ ಪ್ರಾದೇಶಿಕ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ, ಕೊಡವ, ಬಂಜಾರ ಭಾಷೆಯ ಚಿತ್ರಗಳಿಗೂ ಸಂಬoಧಿಸಿದ ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶ ನಮಗಿದೆ. ಕನ್ನಡ ಚಿತ್ರರಂಗಕ್ಕೆ ಸಂಬoಧಿಸಿದ ಮಹನೀಯರ ಕುರಿತ ಕೈಪಿಡಿಗಳನ್ನು ಪ್ರಕಟಿಸುವ ಉದ್ದೇಶ ಕೂಡ ಇದೆ. ಈಗಾಗಲೇ ಅಮೃತೋತ್ಸವದ ಸಂದರ್ಭದಲ್ಲಿ ವಾಣಿಜ್ಯ ಉದ್ದೇಶ ಕೂಡ ಇದೆ. ಈಗಾಗಲೇ ಅಮೃತೋತ್ಸವದ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯು ರೂಪಿಸಿದ್ದ ೭೫ ಪುಸ್ತಕಗಳ ಸ್ವರೂಪದಲ್ಲಿ ಆದರೆ ಅದಕ್ಕಿಂತ ಹೆಚ್ಚು ಆದರೆ ಅದಕ್ಕಿಂತ ಹೆಚ್ಚು ವ್ಯಾಪಕವಾಗಿ ಈ ಮಾಲಿಕೆ ರೂಪುಗೊಳ್ಳಲಿದೆ ಎನ್ನುವ ಉದ್ದೇಶ ನಮ್ಮದು. ಇದಕ್ಕಾಗಿ ಈಗಾಗಲೇ ಸಂಚಾಲನಾ ಸಮಿತಿ ರಚನೆಯಾಗಿದ್ದು ತಕ್ಷಣದಲ್ಲಿ ಸಭೆ ನಡೆಸಿ ಈ ವಿಷಯದಲ್ಲಿ ಚಾಲನೆ ನೀಡಲಾಗುವುದು.

ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪದವಿ, ಸ್ನಾತಕೋತ್ತರ ಹಂತದಲ್ಲಿ ಸಿನಿಮಾವು ಅಧ್ಯಯನ ವಿಷಯವಾಗಿದೆ. ಆದರೆ ಕನ್ನಡದಲ್ಲಿ ಇದಕ್ಕೆ ಸೂಕ್ತ ಎನ್ನಿಸಬಲ್ಲ ಪುಸ್ತಕಗಳು ದೊರಕುತ್ತಿಲ್ಲ. ಅದಕ್ಕೆ ಅನುಗುಣವಾದ ಪುಸ್ತಕಗಳನ್ನು ರೂಪಿಸಲು ಪ್ರಸ್ತುತ ಆದ್ಯತೆಯನ್ನು
ನೀಡಲಾಗುತ್ತದೆ. ಸಿನಿಮಾ ಕುರಿತು ಬರೆಯಬಲ್ಲ ಬರಹಗಾರರ ಮತ್ತು ಮಾರ್ಗದರ್ಶನ ಮಾಡಬಲ್ಲ ಪರಿಣಿತರ ಪಟ್ಟಿಯನ್ನು ತಯಾರಿಸಿ ಎಲ್ಲಾ ಕಾಲದಲ್ಲಿಯೂ ಬರಹ ನಿರಂತರವಾಗಿ ಇರುವಂತೆ ನೋಡಿಕೊಳ್ಳಲಾಗುವುದು. ಈ ಮೂಲಕ ಸಿನಿಮಾ ಸಾಹಿತ್ಯಕ್ಕೆ ಕೂಡ ಕನ್ನಡದಲ್ಲಿ ಮಹತ್ವದ ಸ್ಥಾನ ದೊರಕುವಂತೆ ನೋಡಿಕೊಳ್ಳಲಾಗುವುದು. ಇದರ ಜೊತೆಗೆ ಈಗಾಗಲೇ ಅನ್ಯ ಭಾಷೆಗಳಲ್ಲಿ ಪ್ರಕಟಗೊಂಡಿರುವ ಪ್ರಮುಖವಾದ ಸಿನಿಮಾ ಕುರಿತ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಯೋಜನೆಯನ್ನು ಕೂಡ ರೂಪಿಸುವ ಉದ್ದೇಶ ಇದೆ.

ಅಕಾಡೆಮಿಯಲ್ಲಿ ಸಿನಿಮಾ ಕುರಿತ ಹಾಗೆ ಸದಾ ಅತ್ಯುತ್ತಮ ಪುಸ್ತಕಗಳು ಇರುವಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ರಾಜ್ಯ ಮತ್ತು ರಾಷ್ಟಪ್ರಶಸ್ತಿಗಳು ಬಂದ ಪುಸ್ತಕಗಳನ್ನು, ನೋಡಿಕೊಳ್ಳಲಾಗುವುದು. ಇದಕ್ಕಾಗಿ ರಾಜ್ಯ ಮತ್ತು ರಾಷ್ಟಪ್ರಶಸ್ತಿಗಳು ಬಂದ ಪುಸ್ತಕಗಳನ್ನು, ಬಹುಮಾನ ಪಡೆದ ಪುಸ್ತಕಗಳನ್ನು ಖರೀದಿಸಿ ಅದು ಅಕಾಡೆಮಿಯ ಗ್ರಂಥಾಲಯದಲ್ಲಿ ಲಭ್ಯ ಇರುವಂತೆ ಮಾಡುವುದು ಕೂಡ ಗಮನದಲ್ಲಿ ಇದೆ.
ಒಟ್ಟಿನಲ್ಲಿ ಅಕಾಡೆಮಿಯಿಂದ ನಿರಂತರವಾಗಿ ಸಿನಿಮಾ ಕುರಿತ ಪುಸ್ತಕಗಳು ಪ್ರಕಟ ಆಗುತ್ತಾ ಇರುವಂತೆ ನೋಡಿಕೊಳ್ಳುವ ಕನಸು ನಮ್ಮದಾಗಿದೆ.

ಸಿನಿಮಾ ಕೂಡ ನಮ್ಮ ಸಂಸ್ಕೃತಿಯ ಭಾಗವಾಗುವುದು ಅದು ಶಿಕ್ಷಣದ ಭಾಗವಾದಾಗ ಮಾತ್ರ ಸಾಧ್ಯ. ಇದನ್ನು ಸಾಂಸ್ಕೃತಿಕವಾಗಿ ಅಧ್ಯಯನ ಮಾಡುವುದು ಒಂದು ಉದ್ದೇಶವಾದರೆ, ಇವತ್ತು ಸಿನಿಮಾ ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಒದಗಿಸುತ್ತಿದೆ. ಕಾಲೇಜು ಹಂತದಲ್ಲಿಯೇ ಸಿನಿಮಾಕ್ಕೆ ಬೇಕಾದ ಕೌಶಲ್ಯಗಳ ತರಬೇತಿಯನ್ನು ನೀಡುವುದು ಇನ್ನೊಂದು ಕನಸು. ಸಿನಿಮಾವನ್ನು ನೋಡುವುದು ಹೇಗೆ ಎಂದು ಈ ಹಂತದಲ್ಲಿಯೇ ಕಲಿಸುವುದು ಇನ್ನೊಂದು ಕನಸು. ಹೀಗೆ ‘ಶಿಕ್ಷಣದಲ್ಲಿ ಸಿನಿಮಾ ಮತ್ತು ಸಿನಿಮಾ ಮೂಲಕ ಶಿಕ್ಷಣ’ ಈ ಎರಡೂ ಕನಸನ್ನು ಅಕಾಡೆಮಿಯ ಮೂಲಕ ಸಾಧಿಸುವ ಉದ್ದೇಶ ನಮಗೆ ಇದೆ.

ಇಂದು ಕರ್ನಾಟಕದಲ್ಲಿ ಹಲವು ಪ್ರಮುಖ ವಿಶ್ವವಿದ್ಯಾಲಯಗಳಿವೆ. ಯು.ಜಿ.ಸಿ ಮಾನ್ಯತೆ ಪಡೆದವುಗಳು ಮಾತ್ರವಲ್ಲದೆ ಖಾಸಗಿ ಕ್ಷೇತ್ರದಲ್ಲಿ ಕೂಡ ಪ್ರಮುಖ ವಿಶ್ವವಿದ್ಯಾಲಯಗಳಿವೆ. ಇಲ್ಲೆಲ್ಲಾ ಚಲನಚಿತ್ರದ ಕುರಿತು ಅಧ್ಯಯನ ನಡೆಯುತ್ತಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ.ರಾಜ್ ಕುಮಾರ್ ಅಧ್ಯಯನ ಪೀಠವಿದೆ. ಉಳಿದೆಡೆ ಕೂಡ ಇಂತಹ ಅಧ್ಯಯನ ತಾಣಗಳಿವೆ. ಅಧ್ಯಯನ ವಿಷಯದಲ್ಲಿ ಕೂಡ ಚಲನಚಿತ್ರ ಸ್ವತಂತ್ರವಾಗಿ ಇಲ್ಲವೆ ಸಮೂಹ ಶಿಕ್ಷಣದ ಭಾಗವಾಗಿ ಸೇರಿಕೊಂಡಿದೆ. ಚಲನಚಿತ್ರದಲ್ಲಿಯೇ ಸ್ನಾತಕೋತ್ತರ ಪದವಿಯನ್ನು ನೀಡುವ ವಿಶ್ವವಿದ್ಯಾಲಯಗಳೂ ಕೂಡ ಇವೆ. ಇದಲ್ಲದೆ ಚಲನಚಿತ್ರದ ತರಬೇತಿಗೆ ಎಂದೇ ಹಲವು ಸಂಸ್ಥೆಗಳಿವೆ. ಇಲ್ಲೆಲ್ಲ ಸಿನಿಮಾಕ್ಕೆ ಸಂಬoಧಿಸಿದ ಅಧ್ಯಯನ ಕಾರ್ಯವು ನಡೆಯುತ್ತಿದೆ. ಆದರೆ ಇವೆಲ್ಲವೂ ಪ್ರತ್ಯೇಕವಾಗಿ ನಡೆಯುತ್ತಿದೆ. ಸಮನ್ವಯದ ಕೊರತೆ ಇದೆ. ಇದರಿಂದ ಒಬ್ಬರು ಈಗಾಗಲೇ ಮಾಡಿದ ಕೆಲಸವನ್ನೇ ಇನ್ನೊಬ್ಬರು ಮಾಡುತ್ತಿದ್ದಾರೆ. ಕೆಲವರು ಅಚಿತಿಮ ಹಂತಕ್ಕೆ ತೆಗೆದುಕೊಂಡು ಹೋಗಿರುವ ಯೋಜನೆಗಳನ್ನೇ ಇನ್ನು ಕೆಲವರು ಆರಂಭಿಕ ಹಂತದಲ್ಲಿ ಮಾಡುತ್ತಿದ್ದಾರೆ. ಸಾಕಷ್ಟು ಕೆಲಸಗಳು ನಡೆಯುತ್ತಿದ್ದರೂ ಇದಕ್ಕೆ ಸಮಗ್ರತೆ ದೊರಕದಂತಾಗಿದೆ. ನಟನೆ, ಸಂಕಲನ, ಛಾಯಾಗ್ರಹಣ, ನಿರ್ದೇಶನ ಮೊದಲಾದ ವಿಷಯಗಳ ಕುರಿತು ಚಲನಚಿತ್ರ ಅಕಾಡೆಮಿ ಕಾರ್ಯಾಗಾರಗಳನ್ನು ರೂಪಿಸಲು ಉದ್ದೇಶಿಸಿದೆ. ಸರ್ಕಾರ ಕೂಡ ಇದಕ್ಕೆ ಅಗತ್ಯ ನೆರವನ್ನು ನೀಡಲು ಮುಂದೆ ಬಂದಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಡಿಯಲ್ಲಿ ಬರುವ ತರಬೇತಿ ಕಾರ್ಯಾಗಾರಗಳ ಹೊಣೆಯನ್ನೂ ಕೂಡ ಚಲನಚಿತ್ರ ಅಕಾಡೆಮಿ ವಹಿಸಿಕೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಹೀಗೆ ಕೆಲಸ ಮಾಡುತ್ತಿರುವವರೆಲ್ಲರನ್ನೂ ಒಂದು ವಿಶಾಲ ಆವರಣದ ಅಡಿ ತರುವ ಕೆಲಸವನ್ನು ಚಲನಚಿತ್ರ ಅಕಾಡೆಮಿ ಮಾಡಬೇಕು ಎಂದು ನಿರ್ಧರಿಸಿದೆವು. ಇದರಿಂದ ರಾಜ್ಯದ ಎಲ್ಲಾ ಪ್ರಮುಖ ವಿಶ್ವವಿದ್ಯಾಲಯಗಳ ಜೊತೆಗೆ ಹೊಂದಾಣಿಕೆ ಒಪ್ಪಂದಕ್ಕೆ ಬರಲಿದ್ದೇವೆ. ಈಗಾಗಲೇ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದಕ್ಕೆ ಬರಲಾಗಿದ್ದು ಶೀಘ್ರದಲ್ಲಿಯೇ ದಾವಣಗೆರೆ ಮತ್ತು ಮಣಿಪಾಲ ವಿಶ್ವವಿದ್ಯಾಲಯಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಉಳಿದ ವಿಶ್ವವಿದ್ಯಾಲಯಗಳ ಜೊತೆಗೆ ಮಾತುಕತೆ ಮುಂದುವರೆದಿದೆ. ಈ ಮೂಲಕ ಅಕಾಡೆಮಿ ಚಲನಚಿತ್ರ ಶಿಕ್ಷಣದ ತನ್ನ ಮೂಲ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾ ಇದೆ. ಇದು ಮುಂದೆ ವಿಶಾಲ ರೂಪವನ್ನು ತಳೆಯಲಿದೆ ಎನ್ನುವ ವಿಶ್ವಾಸ ನಮ್ಮದು. ಈಗಾಗಲೇ ಎಸ್.ಜೆ.ಪಿ ಮತ್ತು ಆದರ್ಶ ಫಿಲಂ ಮೂಲಕ ರಾಜ್ಯ ಸರ್ಕಾರವು ಚಲನಚಿತ್ರ ತರಬೇತಿಯ ಕೋರ್ಸ್ಗಳನ್ನು ನಡೆಸುತ್ತಿದೆ. ಈ ಎರಡೂ ಪ್ರತಿಷ್ಠಿತ ಸಂಸ್ಥೆಗಳಿoದ ಬಂದವರು ರಾಷ್ಟದೆಲ್ಲೆಡೆ ಹೆಸರನ್ನು ಮಾಡಿದ್ದಾರೆ.

೧೯೧೩ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಸ್ಪೂರ್ತಿಯ ಫಲವಾಗಿ ರೂಪುಗೊಂಡಿದ್ದು ಎಸ್.ಜೆ.ಪಿ ಅಥವಾ ಶ್ರೀಜಯಚಾಮರಾಜೇಂದ್ರ ಶಿಕ್ಷಣ ಸಂಸ್ಥೆ. ೧೯೪೩ರಿಂದ ಇಲ್ಲಿ ಹನ್ನೆರಡು ವಿಷಯಗಳಲ್ಲಿ ತರಬೇತಿ ಆರಂಭವಾಯಿತು. ಸಿನಿಮೋಟೋಗ್ರಫಿ ಆರಂಭದ ದಿನದಿಂದಲೂ ಶುರುವಾಗಿದ್ದು ಮುಂದೆ ಅದರ ವ್ಯಾಪ್ತಿ ವಿಸ್ತಾರವಾಯಿತು. ವಿ.ಕೆ.ಮೂರ್ತಿ, ಗೋವಿಂದ ನಿಹಲಾನಿ, ಆರ್.ಎನ್.ಕೃಷ್ಣಪ್ರಸಾದ್, ಆರ್.ಎನ್.ಜಯಗೋಪಾಲ್, ಬಿ.ಎಸ್.ಬಸವರಾಜ್, ನಿಹಲಾನಿ, ಆರ್.ಎನ್.ಕೃಷ್ಣಪ್ರಸಾದ್, ಆರ್.ಎನ್.ಜಯಗೋಪಾಲ್, ಬಿ.ಎಸ್.ಬಸವರಾಜ್, ಕುಣಿಗಲ್ ನಾಗಭೂಷಣ್, ಬಿ.ಸಿ.ಗೌರಿಶಂಕರ್ ಸೇರಿದಂತೆ ಹಲವು ಸಾಧಕರು ಇಲ್ಲಿ ಪ್ರಾಂಶುಪಾಲರಾಗಿ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿರುವುದಲ್ಲದೆ ಹಲವು ಪ್ರತಿಭಾವಂತರನ್ನು ಬೆಳಕಿಗೆ ತಂದಿದ್ದಾರೆ. ಈ ಎರಡೂ ಸಂಸ್ಥೆಗಳು ಈಗ ತಮ್ಮದೇ ಆದ ಕಾರಣಕ್ಕೆ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದು, ಇವೆರಡನ್ನೂ ಅಕಾಡೆಮಿಯ ತೆಕ್ಕೆಗೆ ತೆಗೆದುಕೊಂಡು ಪರಂಪರೆಯ ಜೊತೆಗೆ ಇಂದಿನ ಸಾಧ್ಯತೆಗೆ ಅನುಗುಣವಾಗಿ ಚಲನಚಿತ್ರ ತರಬೇತಿಯನ್ನು ನೀಡುವ ಮಹತ್ವಾಕಾಂಕ್ಷೆ ನನಗೆ ಇದೆ. ಈ ವಿಷಯದಲ್ಲಿ ಶೀಘ್ರದಲ್ಲಿಯೇ ಪತ್ರ ವ್ಯವಹಾರ ನಡೆಸಲಾಗುವುದು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಚಟುವಟಿಕೆಗಳು ಕ್ರಿಯಾಶೀಲವಾಗಲು ಈಗಿರುವ ನಂದಿನಿ ಲೇಔಟ್‌ನ ಅಮೃತೋತ್ಸವ ಭವನದ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ತಿ ಮಾಡುವುದು ಅತ್ಯಗತ್ಯವಾಗಿದೆ. ಮಳೆ ಬಂದರೆ ನೀರು ನಿಂತು ಕೆಳಗಿನ ಮಹಡಿ ಪೂರ್ಣ ನೀರಿನಿಂದ ಆವೃತವಾಗುತ್ತಿದೆ. ಪಾರಿವಾಳಗಳು ಇಲ್ಲಿ ಗೂಡು ಕಟ್ಟಿ ಇದನ್ನೇ ತಮ್ಮ ನೀರಿನಿಂದ ಆವೃತವಾಗುತ್ತಿದೆ. ಪಾರಿವಾಳಗಳು ಇಲ್ಲಿ ಗೂಡು ಕಟ್ಟಿ ಇದನ್ನೇ ತಮ್ಮ ಮನೆಯನ್ನಾಗಿಸಿಕೊಂಡಿವೆ. ಇದಕ್ಕೆಲ್ಲ ಪರಿಹಾರವೆಂದರೆ ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚಿಸಿ ಇದನ್ನು ವಾಸಯೋಗ್ಯ ಕಟ್ಟಡವನ್ನಾಗಿಸುವುದು. ಅಂತಹ ಪ್ರಯತ್ನಗಳಲ್ಲಿ ನಾವು ಸಾಗಿದ್ದೇವೆ. ಇದರ ಜೊತೆಗೆ ಕಟ್ಟಡದ ನಿರ್ವಹಣೆಗೆ ವಾರ್ತಾ ಇಲಾಖೆಗೆ ಮನವಿ ಸಲ್ಲಿಸುವ ಉದ್ದೇಶವೂ ಇದ್ದು, ಈ ಮೂಲಕ ನಮ್ಮ ಯೋಜನೆಗಳು ರೂಪ ಪಡೆಯುವಂತೆ ಮಾಡಬಹುದಾಗಿದೆ.

ಅಮೃತೋತ್ಸವ ಕಟ್ಟಡದಲ್ಲಿಯೇ ಸೂಕ್ತ ವ್ಯವಸ್ಥೆಯೊಂದಿಗೆ ಕಿರು ಚಿತ್ರಮಂದಿರಗಳನ್ನು ನಿರ್ಮಿಸಿ ಇದನ್ನು ಚಿತ್ರರಂಗದ ಎಲ್ಲಾ ಚಟುವಟಿಕೆಗಳ ಕೇಂದ್ರ ತಾಣವಾಗಿಸುವುದು ನಮ್ಮ ತಂಡದ ಬಹು ದೊಡ್ಡ ಕನಸಾಗಿದೆ. ಇಲ್ಲಿ ಸಮೀಪದಲ್ಲಿಯೇ ಇರುವ ಇಂದಿರಾ ಕ್ಯಾಂಟೀನ್ ಕಾರಣದಿಂದ ಇಲಿ ಹೆಗ್ಗಣಗಳ ಓಡಾಟವು ನಿರಾಂತಕವಾಗಿ ನಡೆಯುತ್ತಾ ಇದ್ದು, ಇದನ್ನು ತಪ್ಪಿಸಲು ಅದನ್ನು ಸ್ಥಳಾಂತರ ಮಾಡಲು ಒತ್ತಡ ತರಲಾಗುವುದು.

ಈಗಾಗಲೇ ಈ ನಿಟ್ಟಿನಲ್ಲಿ ಸಂಚಾಲನಾ ಸಮಿತಿ ರಚನೆಗೆ ಪೂರಕವಾದ ಕೆಲಸವು ಪ್ರಾರಂಭವಾಗಿದೆ.

೧೨ ವರ್ಷಗಳ ಕಾಲ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದ ನಂತರ ರಾಷ್ಟಿಯ ಚಿತ್ರೋತ್ಸವ ಈ ವರ್ಷ ನಡೆಯುವುದೇ ಇಲ್ಲವೆ? ಎನ್ನುವ ಅನುಮಾನ ಕಳೆದ ಚಿತ್ರೋತ್ಸವ ಮುಗಿದ ನಂತರದಿoದಲೂ ಕೇಳಿ ಬರುತ್ತಲೇ ಇತ್ತು. ಕಾರಣ ಆಗಿನಿಂದಲೂ ಕರೋನಾದ ಕರಾಳ ಛಾಯೆ ದೇಶದೆಲ್ಲೆಡೆ ಚಾಚಿತ್ತು. ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಾ ಬಂದರೂ ಆತಂಕ ಇದ್ದೇ ಇತ್ತು. ಆದರೆ ಚಿತ್ರೋತ್ಸವವನ್ನು ನಡೆಸಲೇ ಬೇಕಾದ ಅನಿವಾರ್ಯತೆ ನಮಗೆ ರೂಪುಗೊಂಡಿತ್ತು. ಏಕೆಂದರೆ ಈ ಉತ್ಸವವು ನಡೆದರೆ ದೊರೆತಿದ್ದ ಅಂತರರಾಷ್ಟಿಯ ಮನ್ನಣೆ ಖಚಿತವಾಗುತ್ತಿತ್ತು. ವಿಶ್ವದ ಸರಿ ಸುಮಾರು ಐದು ಸಾವಿರ ಸ್ಥಳಗಳಲ್ಲಿ ಜಾಗತಿಕ ಚಿತ್ರೋತ್ಸಗಳು ನಡೆಯುತ್ತವೆ. ಅದರಲ್ಲಿ ಕೇವಲ ೪೫ ಚಲನಚಿತ್ರೋತ್ಸವಗಳಿಗೆ ಮಾತ್ರ ಜಾಗತಿಕ ಮನ್ನಣೆ ದೊರಕಿದೆ. ಇಂತಹ ಮನ್ನಣೆ ಪಡೆದರೆ ಬೆಂಗಳೂರು ೪೬ನೇ ಚಿತ್ರೋತ್ಸವ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತದೆ ಎಂಬುದು ನಮ್ಮ ಮನದಲ್ಲಿ ಇತ್ತು. ಇದಕ್ಕಾಗಿ ೨೦೨೦ರ ಡಿಸಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇದಕ್ಕಾಗಿ ಅನುಮತಿಯನ್ನು ಕೋರಿದೆವು. ನನ್ನ ಜೊತೆ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಿ.ಆರ್.ಜೈರಾಜ್, ಚಿತ್ರೋತ್ಸವದ ಕಲಾ ನಿರ್ದೇಶಕ ಎನ್.ವಿದ್ಯಾಶಂಕರ್, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶೃತಿ ಮತ್ತು ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಸೇರಿದಂತೆ ಅನೇಕ ಗಣ್ಯರು ಇದ್ದರು. ಮುಖ್ಯಮಂತ್ರಿಗಳು ನಮ್ಮ ಮಾತನ್ನು ತಾಳ್ಮೆಯಿಂದ ಕೇಳಿ ಚಿತ್ರೋತ್ಸವವನ್ನು ನಡೆಸಲು ತಾತ್ವಿಕ ಅನುಮತಿ ನೀಡಿದರು. ಅಲ್ಲಿಗೆ ನಮ್ಮ ಮೇಲೆ ಇದ್ದ ದೊಡ್ಡ ಭಾರ ಇಳಿದಂತಾಯಿತು.

ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಎಂದಿನoತೆ ಚಿತ್ರೋತ್ಸವದ ಉತ್ಸಾಹ ಕಾಣಿಸಿ ಕೊಂಡಿತು. ಅಂತರ ರಾಷ್ಟಿಯ ಚಲನಚಿತ್ರೋತ್ಸವದ ಕಛೇರಿ ತನ್ನ ಕೆಲಸವನ್ನು ಆರಂಭಿಸಿತು. ಮುಖ್ಯವಾಗಿ ವಿದೇಶದಿಂದ ಪಡೆಯಬೇಕಾದ ಚಿತ್ರಗಳ ಕುರಿತು ನಡೆಯ ಬೇಕಾದ ಪತ್ರ ವ್ಯವಹಾರಗಳು, ಸಂಪರ್ಕಗಳು ಶೀಘ್ರವಾಗಿ ಆರಂಭವಾದವು. ಕಳೆದ ಚಿತ್ರೋತ್ಸವದ ಸಂದರ್ಭದಲ್ಲಿಯೇ ಜರ್ಮನ್ ಗೋಥೆ ಇನ್ಸ್ಟಿಟ್ಯೂಟ್ ಮತ್ತು ಮ್ಯಾಕ್ಸಮುಲ್ಲರ್ ಭವನದ ಜೊತೆ ಸಂಪರ್ಕವನ್ನು ಸಾಧಿಸಲಾಗಿತ್ತು. ಇವರು ಜರ್ಮನ್ ಚಿತ್ರಗಳನ್ನು ಒದಗಿಸಲು ಒಪ್ಪಿಕೊಂಡರು. ಖ್ಯಾತ ಜರ್ಮನ್ ಚಿತ್ರ ನಿರ್ದೇಶಕ ವೋಲ್ಕರ್ ಸ್ಕಾಲ್‌ಡ್ರಾಫ್ ಅವರ ಚಿತ್ರಗಳ ಸಿಂಹಾವಲೋಕನ ಯೋಜಿತವಾಯಿತು. ಅವರ ನಿರ್ದೇಶನದ ಆರು ಪ್ರಮುಖ ಚಿತ್ರಗಳು ಈ ಸಂಸ್ಥೆಗಳ ಸಹಕಾರದಿಂದ ದೊರಕಿದವು. ಸ್ವತ: ಸ್ಕಾಲ್‌ಡ್ರಾಫ್ ಮಾಸ್ಟರ್ ಕ್ಲಾಸ್ ನಡೆಸಲು ಒಪ್ಪಿಕೊಂಡಿದ್ದರು. ಇನ್ನು ಎಂದಿನoತೆ ಕನ್ನಡ ಸಿನಿಮಾ ಸ್ಪರ್ಧೆ, ಭಾರತೀಯ ಚಿತ್ರಗಳನ್ನು ಪ್ರದರ್ಶಿಸಲಿರುವ ಚಿತ್ರಭಾರತಿ ಹಾಗೂ ಏಷಿಯನ್ ಸ್ಪರ್ಧಾ ವಿಭಾಗಗಳಿಗೆ ಚಿತ್ರಗಳನ್ನು ಆಹ್ವಾನಿಸಲಾಯಿತು. ಈ ಪ್ರಕ್ರಿಯೆಯು ಜನವರಿ ೨೬ರಿಂದ ಆರಂಭವಾಯಿತು. ಏಪ್ರಿಲ್ ಮೊದಲ ವಾರದಲ್ಲಿ ಚಿತ್ರೋತ್ಸವ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೆನಪು, ಸತ್ಯಜಿತ್ ರೇ ಅವರ ೧೦೦ನೇ ವರ್ಷದ ನೆನಪುಗಳನ್ನು ಚಿತ್ರೋತ್ಸವದಲ್ಲಿ ಅಳವಡಿಸಲು ನಿರ್ಧರಿಸಲಾಗಿತ್ತು. ಚಿತ್ರೋತ್ಸವದ ಜೊತೆಗೆ ಚಿತ್ರಕಥೆ ತರಬೇತಿ ಶಿಬಿರ, ನಿರ್ದೇಶನದ ಕೌಶಲ್ಯ ಶಿಬಿರ, ಸಿನಿಮಾ ಸಂಸ್ಕೃತಿ, ರಸಗ್ರಹಣ ಕುರಿತ ಶಿಬಿರಗಳು ಎಲ್ಲವೂ ಸಿದ್ಧವಾದವು. ಪ್ರತಿನಿಧಿ ನೋಂದಣಿಗೆ ಅನ್ ಲೈನ್ ವ್ಯವಸ್ಥೆ ಕೂಡ ರೂಪುಗೊಂಡಿತು. ತೀರ್ಪುಗಾರರ, ಆಯ್ಕೆದಾರರ ಪಟ್ಟಿ ಸಿದ್ದವಾಯಿತು.

೧೩ನೇ ಬೆಂಗಳೂರು ಅಂತರರಾಷ್ಟಿಯ ಚಿತ್ರೋತ್ಸವಕ್ಕೆ ನಾವು ಸಂಪೂರ್ಣವಾಗಿ ಸಜ್ಜಾಗಿದ್ದೆವು. ಆದರೆ ನಮ್ಮೆಲ್ಲರ ಊಹೆಯನ್ನೂ ಮೀರಿ ಕರೋನಾದ ಎರಡನೇ ಅಲೆ ಅಪ್ಪಳಿಸಿತು. ಹಲವು ಸುತ್ತಿನ ಚಿಂತನ ಮಂಥನಗಳ ನಂತರ ಚಿತ್ರೋತ್ಸವವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಂದೂಡುವುದು ಅನಿವಾರ್ಯವಾಯಿತು. ೨೦೨೧ರ ಮಾರ್ಚಿ ೧೬ಕ್ಕೆ ಚಿತ್ರೋತ್ಸವದ ಕೆಲಸಗಳನ್ನು ನಿಲ್ಲಿಸುವುದು ಘೋಷಿಸಲಾಯಿತು. ಚಿತ್ರೋತ್ಸವ ನಡೆಯದಿದ್ದರೂ ಇದಕ್ಕಾಗಿ ದುಡಿದಿದ್ದು ನನ್ನ ಅನುಭವ ಹೆಚ್ಚಿಸಿತು.

ಭಾರತದ ಮೊದಲ ವಾಕ್ಚಿತ್ರ ‘ಆಲಂ ಆರಾ’ದಲ್ಲಿ ಕನ್ನಡಿಗರಾದ ಸರ್ವೋತ್ತಮ ಬಾದಾಮಿ ಕೆಲಸ ಮಾಡಿದ್ದರು. ಆರಂಭಿಕ ದಿನಗಳಲ್ಲಿಯೇ ಅಮೀರ್ ಬಾಯಿ ಕರ್ನಾಟಕಿ ರಾಷ್ಟಮಟ್ಟದ ಮನ್ನಣೆ ಪಡೆದಿದ್ದರು. ಆರ್.ನಾಗೇಂದ್ರ ರಾಯರು ಅರ್ದಿಶ್ಕರ್ ಇರಾನಿಯವರ ಬಳಿ ಕೆಲಸ ಮಾಡಿದ್ದರು. ‘ನಿಶಾನ್’ ಹಿಂದಿ ಚಿತ್ರದ ಅಭಿನಯಕ್ಕೆ ಶ್ರೇಷ್ಠ ಖಳ ನಟ ಪುರಸ್ಕಾರ ಪಡೆದಿದ್ದರು. ಎಂ.ಆರ್.ವಿಠಲ್ ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆಯವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ೧೯೩೧ರಲ್ಲಿಯೇ ‘ಅಸೋಂಕಿ ದುನಿಯಾ’ ಹಿಂದಿ ಚಿತ್ರ ನಿರ್ದೇಶನ ಮಾಡಿದ್ದ ಅವರು ಫ್ರೆಂಚ್ ಚಿತ್ರ ‘ಬರ್ನಿಂಗ್ ಟ್ರೆನ್’ ನಿರ್ದೇಶನ ಕೂಡ ಮಾಡಿದ್ದರು. ಕನ್ನಡದ ಸಂಗೀತ ನಿರ್ದೇಶಕ ಎಚ್.ಆರ್.ಪದ್ಮನಾಭ ಶಾಸ್ತಿ ಭಾರತೀಯ ಚಿತ್ರರಂಗದ ದಂತಕತೆ ಸೈಗಲ್ ಅವರ ಬಳಿ ತರಬೇತಿ ಪಡೆದಿದ್ದರು. ಕು.ರ. ಸೀತಾರಾಮ ಶಾಸ್ತಿಗಳು ೧೯೬೦ರ ದಶಕದಲ್ಲಿಯೇ ಮಲಯಾ ಭಾಷೆಯಚಿತ್ರಗಳನ್ನು ನಿರ್ದೇಶಿಸಿದ್ದರು. ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ ಶ್ಯಾಂಬೆನಗಲ್, ಗುರುದತ್, ವಿ.ಕೆ.ಮೂರ್ತಿ ಎಲ್ಲರೂ ಕನ್ನಡಿಗರೇ.. ಇವರುಗಳ ಕುರಿತು ಕೈಪಿಡಿ ಮಾಡಿ ಅವರ ಸಾಧನೆಗಳನ್ನು ಎಲ್ಲರಿಗೂ ಪರಿಚಯ ಮಾಡುವುದು ಮತ್ತು ಅವರ ಸಾಧನೆಯ ವಿವರಗಳ್ನು ಗ್ರಂಥಾಲಯದಲ್ಲಿ ಸಂಗ್ರಹಿಸಿ ಇಡುವುದು ಎರಡೂ ನಮ್ಮ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ಈ ವಿಷಯದಲ್ಲಿ ತ್ವರಿತಗತಿಯಿಂದ ಕೆಲಸಗಳು ಆರಂಭವಾಗಿದೆ ಎಂದು ತಿಳಿಸಲು ಸಂತೋಷವಾಗುತ್ತದೆ.

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಚಿತ್ರೋತ್ಸವ ನಡೆಸುವ ಕನಸು ಇದೆ. ಜೊತೆಗೆ ಅಲ್ಲಿ ಕಾರ್ಯಾಗಾರಗಳನ್ನು ಮಾಡಲಾಗುವುದು. ಇದರಿಂದ ಆ ಭಾಗದ ಪ್ರತಿಭಾವಂತರು ಬೆಳಕಿಗೆ ಬರುವುದರ ಜೊತೆಗೆ ಉದ್ಯೋಗ ಸೃಷ್ಟಿ ಕೂಡ ಆಗಲಿದೆ.

‘ಮನೆ ಬಾಗಿಲಿಗೆ ಅಕಾಡೆಮಿ’ ಎನ್ನುವುದು ನಮ್ಮ ಮಹತ್ವಾಕಾಂಕ್ಷೆಯ ಯೋಜನೆ. ಸಾಮಾನ್ಯ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರಕಿದ್ದು ಪ್ರಪ್ರಥಮವಾಗಿ ಐದು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಇದಕ್ಕಾಗಿಯೇ ಸಂಚಾಲನ ಸಮಿತಿಯೊಂದು ರಚನೆಯಾಗಿದ್ದು ಮೊದಲ ಸಭೆಯಲ್ಲಿಯೇ ಇದರ ವಿವರಗಳನ್ನು ಚರ್ಚೆ ಮಾಡಲಾಗಿದೆ.

ಮೊದಲ ಹಂತದಲ್ಲಿ ಧಾರವಾಡ, ಹಾಸನ, ಚಿತ್ರದುರ್ಗ, ಗುಲ್ಬರ್ಗ, ವಿಜಯನಗರ ಜಿಲ್ಲೆಗಳಲ್ಲಿ ಚಿತ್ರೋತ್ಸವ ನಡೆಸಲು ಉದ್ದೇಶಿಸಲಾಗಿದ್ದು ಜಿಲ್ಲೆಯ ಮಹತ್ವವನ್ನು ಬಿಂಬಿಸುವ ಚಿತ್ರಗಳ ಪ್ರದರ್ಶನ, ಅಲ್ಲಿ ಚಿತ್ರೀಕರಣಗೊಂಡ ಚಿತ್ರಗಳ ಬಗ್ಗೆ ಮಾಹಿತಿ, ಅಲ್ಲಿ ಇರುವ ಚಿತ್ರೀಕರಣಕ್ಕೆ ಅನುಕೂಲವಾಗಬಲ್ಲ ಸ್ಥಳಗಳ ಪರಿಚಯ, ಆ ಜಿಲ್ಲೆಯಲ್ಲಿ ಚಿತ್ರರಂಗಕ್ಕೆ ದುಡಿದ ಮಹನೀಯರಿಗೆ ಸನ್ಮಾನ, ಅಲ್ಲಿನ ಸಾಧಕರನ್ನು ಪರಿಚಯಿಸುವುದು, ಆ ಭಾಗದ ಪ್ರತಿಭಾವಂತರು ಬೆಳಕಿಗೆ ಬರಲು ಯೋಜನೆ ರೂಪಿಸುವುದು ಯೋಜನೆಯಲ್ಲಿ ಇದೆ. ಇದರ ಜೊತೆಗೆ ಅನೇಕ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶನ ಮಾಡಿ ಅದರ ಕುರಿತು ವಿಶ್ಲೇಷಣೆಯನ್ನು ರೂಪಿಸಿ ಸ್ಥಳೀಯರು ಅದರಲ್ಲಿ ಭಾಗಿ ಆಗುವಂತೆ ಮಾಡಲಾಗುವುದು. ಚಿತ್ರ ನಿರ್ಮಾಣದ ಕುರಿತೂ ಕೂಡ ತರಬೇತಿ ಶಿಬಿರಗಳನ್ನು ರೂಪಿಸಿ ಸ್ಥಳೀಯರು ಅದರಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಲಾಗುವುದು. ತಳಹಂತದಲ್ಲಿ ಸಿನಿಮಾ ಅಭಿರುಚಿಯನ್ನು ಬೆಳೆಸುವ ಮಹತ್ವಾಕಾಂಕ್ಷೆ ನನ್ನದು.
ಹೀಗೆ ಹಲವು ಯೋಜನೆಗಳು ಹಂತ ಹಂತವಾಗಿ ಜಾರಿಗೆ ಬರಲಿವೆ.

ಕರ್ನಾಟಕದ ಮಧ್ಯ ಭಾಗದ ಆರು ಜಿಲ್ಲೆಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಜಿಲ್ಲೆಗಳೂ ಒಂದಲ್ಲ ಒಂದು ರೀತಿಯಲ್ಲಿ ನೆರೆ ರಾಜ್ಯಗಳ ಗಡಿಗೆ ಹೊಂದಿಕೊಡತೆಯೇ ಇವೆ. ಹೀಗಾಗಿ ಬೇರೆ ಭಾಷೆಗಳ ನಿರಂತರ ಆಕ್ರಮಣವನ್ನು ಎದುರಿಸುತ್ತಾ ಇವೆ. ಬೇರೆ ಭಾಷೆಗಳು ನಮ್ಮ ಗಡಿಯೊಳಗೆ ಪ್ರವೇಶಿಸಿ ಐವತ್ತು ಕಿಲೋ ಮೀಟರ್‌ವರೆಗೂ ನುಗ್ಗುತ್ತಾ ಇದ್ದರೆ, ನಾವು ಬೇರೆ ರಾಜ್ಯದೊಳಗೆ ಐದು ಕಿಲೋಮೀಟರ್ ಕೂಡ ನುಗ್ಗಲು ಆಗುತ್ತಾ ಇಲ್ಲ. ಇದರಿಂದ ಕನ್ನಡ ಚಿತ್ರರಂಗ ನಿರಂತರ ಸವಾಲುಗಳನ್ನು ಎದುರಿಸುತ್ತಾ ಇದೆ. ಇದಕ್ಕಾಗಿ ಗಡಿ ಭಾಗದಲ್ಲಿ ಚಿತ್ರೋತ್ಸವವನ್ನು ನಡೆಸುವ ಉದ್ದೇಶ ನಮ್ಮದು. ಕನ್ನಡ ಭಾಷೆಯ ಪ್ರಗತಿಗಾಗಿ ಈ ಮಹತ್ವಾಕಾಂಕ್ಷೆಯ ಯೋಜನೆ ರೂಪುಗೊಂಡಿದ್ದು ಸಧ್ಯದಲ್ಲಿಯೇ ಸಂಚಾಲನಾ ಸಮಿತಿ ಸಭೆ ಸೇರಿ ಮುಂದಿನ ಎಲ್ಲಾ ವಿಷಯಗಳ ರೂಪುರೇಷೆಯನ್ನು ಸಿದ್ದಪಡಿಸಲಿದೆ.
ಗಡಿಭಾಗದಲ್ಲಿ ಕನ್ನಡದ ಅಭಿಮಾನವನ್ನು ಹೆಚ್ಚಿಸುವ ಉದ್ದೇಶ ಈ ಚಿತ್ರೋತ್ಸವಗಳಲ್ಲಿ ಇರುತ್ತದೆ. ಇದರ ಜೊತೆಗೆ ಆ ಭಾಗದ ಸಂಸ್ಕೃತಿಯನ್ನೂ ಎತ್ತಿ ಹಿಡಿಯಲು ಪ್ರಯತ್ನಿಸಲಾಗವುದು. ಸಂಚಾಲನಾ ಸಮಿತಿ ಯಾವ ಯಾವ ಭಾಗದಲ್ಲಿ ಯಾವ ಯಾವ ಚಿತ್ರಗಳು ಪ್ರದರ್ಶನಗೊಳ್ಳಬೇಕು ಎನ್ನುವುದನ್ನು ಗುರುತಿಸುತ್ತದೆ. ಇದಕ್ಕಾಗಿ ನಿರಂತರ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳುವುದೂ ಈ ಉತ್ಸವದ ಉದ್ದೇಶವಾಗಿದೆ. ಸೋದರ ಭಾಷೆಗಳ ಜೊತೆಗೆ ಸೌಹಾರ್ದಯುತ ಸಂಬAಧವನ್ನು ಇಟ್ಟುಕೊಳ್ಳುವುದೂ ಕೂಡ ಈ ಉತ್ಸವಗಳ ಉದ್ದೇಶವಾಗಿದೆ. ಇದಕ್ಕಾಗಿ ಸ್ಥಳೀಯ ಕನ್ನಡ ಸಂಘಗಳು ಮತ್ತು ಗಡಿ ರಕ್ಷಣಾ ಪ್ರಾಧಿಕಾರದ ಜೊತೆಗೆ ಹೊಂದಾಣಿಕೆಗೆ ಬರಲಾಗುವುದು.

ಕನ್ನಡ ಚಿತ್ರರಂಗದಲ್ಲಿ ಕಥೆಗಳ ಕೊರತೆ ಇದೆ ಎಂಬ ಮಾತು ಪದೇ ಪದೇ ಕೇಳಿ ಬರುತ್ತದೆ. ಇದಕ್ಕಾಗಿಯೇ ರೀಮೇಕ್ ಮಾಡುವುದು ಅನಿವಾರ್ಯವಾಗಿದೆ ಎನ್ನುವ ಸ್ಪಷ್ಟೀಕರಣ ಕೂಡ ಇದೆ. ಇನ್ನೊಂದು ಕಡೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಸಾಹಿತ್ಯದಲ್ಲಿ ಗಟ್ಟಿತನವನ್ನು ಪಡೆದಿದೆ ಎನ್ನುವ ಮಾತೂ ಇದೆ. ಎರಡೂ ವಾದಗಳಲ್ಲಿಯೂ ಕೂಡ ನಿಜವಿದೆ. ಸಮಸ್ಯೆ ಏನೆಂದರೆ ಕನ್ನಡದಲ್ಲಿ ಕಥೆಗಳಿರುವುದು ನಿಜವಾದರೂ ಅದನ್ನು ಚಲನಚಿತ್ರ ಮಾಧ್ಯಮಕ್ಕೆ ಒಗ್ಗಿಸುವವರ ಕೊರತೆ ಕಾಡುತ್ತಿದೆ. ಇನ್ನೊಂದು ಕಡೆ ಸಿನಿಮಾಕ್ಕೆ ಎಂದು ಕಥೆ ಬರೆಯಬಲ್ಲ ಬರಹಗಾರರಿಗೆ ತಮ್ಮ ಕಥೆಗಳು ಎಲ್ಲಿ ಇನ್ನೊಬ್ಬರ ಪಾಲಾಗಿ ಬಿಡುತ್ತದೆಯೋ ಎಂಬ ಹಕ್ಕಿನ ಪ್ರಶ್ನೆ ಕಾಡುತ್ತಿರುತ್ತದೆ. ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯದಲ್ಲಿ ಇರುವಂತೆ ಕೃತಿ ಸ್ವಾಮ್ಯದ ಹಕ್ಕುಗಳನ್ನು ನೋಂದಣಿ ಮಾಡಿಕೊಳ್ಳುವ ಪದ್ದತಿ ಇಲ್ಲ.
ಈ ಹಿನ್ನೆಲೆಯಲ್ಲಿ ಚಲನಚಿತ್ರ ಅಕಾಡೆಮಿಯಲ್ಲಿ ಕಥಾ ಕೋಶ ರೂಪಿಸುವ ಉದ್ದೇಶವಿದೆ. ಇದರಿಂದಾಗಿ ಕಥೆಗಳನ್ನು, ಚಿತ್ರಕಥೆಗಳನ್ನು ಬರೆದು ಇಲ್ಲಿ ನೋಂದಣಿ ಮಾಡಿಕೊಂಡು ತಮ್ಮ ಹಕ್ಕುಗಳನ್ನು ಸ್ಥಾಪಿಸಿ ಕೊಳ್ಳಬಹುದು. ಇದು ವಿವಾದದ ಸಂದರ್ಭದಲ್ಲಿ ಅವರಿಗೆ ನೆರವು ನೀಡಲಿದೆ. ಲಭ್ಯವಿರುವ ಕಥೆಗಳನ್ನು ಚಿತ್ರರಂಗದವರು ಪರಿಶೀಲಿಸಿ ತಮಗೆ ಬೇಕಾದಂತೆ ಆಯ್ಕೆ ಮಾಡಬಹುದು. ಇದರಿಂದ ಅವರ ಅಗತ್ಯಕ್ಕೆ ತಕ್ಕ ಸ್ಪಂದನವೂ ದೊರಕಿದಂತೆ ಆಗುತ್ತದೆ. ಬಹಳ ಮುಖ್ಯವಾಗಿ ಇಂತಹ ಪ್ರಯತ್ನದಿಂದ ಕೃತಿಚೌರ್ಯವನ್ನು ತಡೆಗಟ್ಟಬಹುದಾಗಿದೆ.
ಅಕಾಡೆಮಿಯ ಪತ್ರಿಕೆ ರೂಪಿಸುವುದು, ವೆಬ್ ಸೈಟ್ ನಿರ್ಮಾಣ, ಮಾಹಿತಿ ಕೋಶ
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಚಟುವಟಿಕೆಗಳನ್ನು ನಿರಂತರವಾಗಿ ಆಸಕ್ತರಿಗೆ ತಲುಪಿಸುವುದು ಮತ್ತು ಚಟುವಟಿಕೆಗಳನ್ನು ದಾಖಲಾತಿ ಮಾಡುವ ದೃಷ್ಟಿಯಿಂದ ತ್ರೆಮಾಸಿಕ ಅಥವಾ ದ್ವೆಮಾಸಿಕ ಪತ್ರಿಕೆಯನ್ನು ಹೊರತರುವ ಉದ್ದೇಶವಿದೆ. ಇದರಲ್ಲಿ ಅಕಾಡೆಮಿಯ ಚಟುವಟಿಕೆಗಳ ಜೊತೆಗೆ ಚಿತ್ರರಂಗದ ಚಾರಿತ್ರಿಕ ದಾಖಲಾತಿಗಳು, ಚಟುವಟಿಕೆಗಳ ವಿವರಗಳು, ಬಿಡುಗಡೆಯಾದ ಚಿತ್ರಗಳ ಕುರಿತ ಅಧಿಕೃತ ಅಂಕಿ ಅಂಶಗಳು ಎಲ್ಲವೂ ಲಭ್ಯವಾಗಲಿದೆ. ಇದನ್ನು ಪತ್ರಿಕೆಯ ರೂಪದಲ್ಲಿ ತರುವಂತೆ ಡಿಜಿಟಲ್ ರೂಪದಲ್ಲಿ ಕೂಡ ತರಬಹುದಾಗಿದೆ. ಇದರಿಂದ ಅಕಾಡೆಮಿಯ ಒಟ್ಟು ಚಟುವಟಿಕೆಯ ಕ್ರಿಯಾಶೀಲತೆ ಎಲ್ಲರ ಗಮನಕ್ಕೂ ಬರುವಂತೆ ಆಗುತ್ತದೆ.
ಕನ್ನಡ ಚಿತ್ರರಂಗಕ್ಕೆ ಸಂಬoಧಿಸಿದ ಎಲ್ಲಾ ಕಲಾವಿದರು, ತಂತ್ರಜ್ಞರು, ಬರಹಗಾರರು ಮತ್ತು ಚಿತ್ರರಂಗಕ್ಕೆ ಸಂಬoಧಿಸಿದ ಸಂಘಟನೆಗಳ ಮಾಹಿತಿಯನ್ನು ಒಂದೆಡೆಗೆ ತಂದು ‘ಮಾಹಿತಿ ಕೋಶ’ವನ್ನು ರೂಪಿಸುವುದು ನಮ್ಮ ಉದ್ದೇಶ. ಇದು ಮುದ್ರಿತ ಮತ್ತು ಡಿಜಿಟಲ್ ಎರಡೂ ರೂಪದಲ್ಲಿಯೂ ಇದ್ದು ಸತತವಾಗಿ ಮಾಹಿತಿಗಳನ್ನು ವಿಸ್ತರಿಸಲು ಇಲ್ಲಿ ಅವಕಾಶವನ್ನು ಮಾಡಿಕೊಡಲಾಗುತ್ತದೆ. ಇದು ಚಿತ್ರರಂಗದಲ್ಲಿ ತೊಡಗಿಸಿಕೊಂಡವರಿಗೆಲ್ಲರಿಗೂ ಅಗತ್ಯ ಭೂಮಿಕೆಯನ್ನು ಒದಗಿಸಲಿದೆ.

ಇನ್ನೊಂದು ಮುಖ್ಯವಾದ ಯೋಜನೆ ಎಂದರೆ ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ದುಡಿದ ಮಹನೀಯರ ಕುರಿತ ಸಾಕ್ಷಚಿತ್ರಗಳ ನಿರ್ಮಾಣ. ಈಗಾಗಲೇ ಬೆಳ್ಳಿ ಹೆಜ್ಜೆಯಲ್ಲಿ ಭಾಗವಹಿಸಿದ ಮಹನೀಯರ ಕುರಿತ ಸಾಕ್ಷಚಿತ್ರಗಳನ್ನು ಅಕಾಡೆಮಿ ರೂಪಿಸಿದೆ. ಇದರ ಜೊತೆಗೆ ಇನ್ನಷ್ಟು ಮಹನೀಯರ ಕುರಿತು ಸಾಕ್ಷಚಿತ್ರಗಳ ನಿರ್ಮಾಣ ಬಾಕಿ ಇದೆ. ಅದನ್ನು ವಿಸ್ತಾರವಾಗಿ ಪರಿಣಾಮಕಾರಿಯಾಗಿ ಮಾಡುವ ಉದ್ದೇಶ ನಮ್ಮದು

en_USEnglish