Karnataka Chalanachitra Academy

Home → Privacy Policy

ಖಾಸಗಿತನ ನೀತಿ

(ಜಾಲತಾಣವು ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸದೇ ಇದ್ದರೆ)

ಸಾಮಾನ್ಯ ನಿಯಮಾನುಸಾರ, ಸಂದರ್ಶಕರು ಈ ಜಾಲತಾಣಕ್ಕೆ ಭೇಟಿ ನೀಡಿದಾಗ ಅವರ ವೈಯಕ್ತಿಕ ಮಾಹಿತಿಯನ್ನು ಈ ಜಾಲತಾಣದಲ್ಲಿ ಸಂಗ್ರಹಿಸುವುದಿಲ್ಲ. ಸಂದರ್ಶಕರು ತಾವಾಗೇ ವೈಯಕ್ತಿಕ ಮಾಹಿತಿಯನ್ನು ನೀಡಿದರೆ ಮಾತ್ರ ಪಡೆಯಲಾಗುತ್ತದೆ.

ಸಂದರ್ಶಕರ ಮಾಹಿತಿ

ಸಂದರ್ಶಕರು ಈ ಜಾಲತಾಣಕ್ಕೆ ಸಂದರ್ಶಿಸಿರುವುದನ್ನು ಸಾಂಖಿಕವಾಗಿ ದಾಖಲಿಸಲಾಗುತ್ತದೆ ಮತ್ತು ಈ ಜಾಲತಾಣಕ್ಕೆ ನೀವು ಭೇಟಿ ನೀಡುವಾಗ ಉಪಯೋಗಿಸಿದ ಬ್ರೌಸರ್, ಸರ್ವರ್ ಮತ್ತು ಡೊಮೇನ್, ದಿನಾಂಕ ಮತ್ತು ಸಮಯ, ಡೌನ್ಲೋಡ್ ಮಾಡಿಕೊಂಡ ದಾಖಲೆಗಳನ್ನು ದಾಖಲಿಸಲಾಗುತ್ತದೆ. ಆದರೆ, ಸಂದರ್ಶಕರ ಗುರುತು ಮತ್ತು ಅವರ ಬ್ರೌಸಿಂಗ್ ಚಟುವಟಿಕೆಗಳನ್ನು ನಾವು ಗುರುತಿಸುವುದಿಲ್ಲ (ನ್ಯಾಯಾಲಯಗಳು ವಾರೆಂಟ್ ಮೂಲಕ ಸಂದರ್ಶಕರ ವಿವರ ಪರೀಕ್ಷಿಸಲು ಬಯಸಿದ ಸಂದರ್ಭಹೊರತು ಪಡೆಸಿ.)

ಕುಕೀಸ್

ಸಂದರ್ಶಕರು ಜಾಲತಾಣದಲ್ಲಿ ಮಾಹಿತಿಯನ್ನು ಪಡೆದುಕೊಳ್ಳುವಾಗ ಜಾಲತಾಣಗಳು ತಂತ್ರಾಂಶದ ತುಣುಕನ್ನು ನೀಡುತ್ತವೆ. ಅದಕ್ಕೆ ಕುಕೀಸ್ ಎನ್ನಲಾಗುತ್ತದೆ. ಅಂತಹ ಯಾವುದೇ ಕುಕೀಸ್ ಗಳನ್ನು ಈ ಜಾಲತಾಣದಲ್ಲಿ ಬಳಸಲಾಗಿಲ್ಲ.

ಇ-ಮೇಲ್ ನಿರ್ವಹಣೆ

ಸಂದರ್ಶಕರು ಸಂದೇಶಗಳನ್ನು ಕಳುಹಿಸಿದಾಗ ಮಾತ್ರ ಆ ಕ್ಷಣಕ್ಕೆ ಅವರ ಇ-ಮೇಲ್ ಧಾಖಲಾಗುತ್ತದೆ ಮತ್ತು ಅವರಿಗೆ ಮಾಹಿತಿಯನ್ನು ನೀಡುವುದಕ್ಕೆ ಮಾತ್ರ ಅದನ್ನು ಬಳಸಲಾಗುತ್ತದೆ. ಅದನ್ನು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ ಮತ್ತು ಇನ್ಯಾವುದೇ ಚಟುವಟಿಕೆಗೆ ಅದನ್ನು ಬಳಸಿಕೊಳ್ಳಲಾಗುವುದಿಲ್ಲ. ಸಂದರ್ಶಕರ ಗಮನಕ್ಕೆ ತಾರದೆ ಅದನ್ನು ಬಹಿರಂಗಪಡಿಸುವುದಿಲ್ಲ.

ವೈಯಕ್ತಿಕ ಮಾಹಿತಿ ಸಂಗ್ರಹ

ಸಂದರ್ಶಕರು ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅಥವಾ ತಿಳಿಸಿದರೆ ಅದನ್ನು ಹೇಗೆ ಉಪಯೋಗಿಸಲಾಗುವುದು ಎನ್ನುವುದನ್ನು ತಿಳಿಸಲಾಗುತ್ತದೆ. ಇಲ್ಲಿ ತಿಳಿಸಲಾಗುವ ಮಾಹಿತಿಯಲ್ಲಿ ನಿಮಗೆ ನಂಬಿಕೆ ಬಾರದೇ ಇದ್ದಲ್ಲಿ ಅಥವಾ ಆ ವಿಚಾರಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಬಯಸಿದರೆ “ನಮ್ಮನ್ನು ಸಂಪರ್ಕಿಸಿ” ವಿಭಾದಲ್ಲಿರುವ ವೆಬ್ ಮಾಸ್ಟರ್ ಗಳನ್ನು ಸಂಪರ್ಕಿಸುವುದು ಅವಶ್ಯವಾಗಿದೆ.

ಸೂಚನೆ: ‘ವೈಯಕ್ತಿಕ ಮಾಹಿತಿ’ ಎನ್ನುವ ಗೌಪ್ಯ ಹೇಳಿಕೆಯಲ್ಲಿ ನಿಮ್ಮ ಗುರುತು ಅಥವಾ ಸುಲಭವಾಗಿ ಗುರುತಿಸಲು ಸಹಕರಿಸುವ ಅಂಶಗಳನ್ನು ನಮೂದಿಸಲಾಗಿರುತ್ತದೆ.​

ಸಂದರ್ಶಕರು ವೈಯಕ್ತಿಕ ಮಾಹಿತಿ ನೀಡಿದರೆ

1. ಇಲಾಖೆ ಸಂದರ್ಶಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಒಂದು ವೇಳೆ ಸಂದರ್ಶಕರು ತಮ್ಮ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ, ಹಿಮ್ಮಾಹಿತಿ, ಕೇಳಿದ ಪ್ರಶ್ನೆಗಳಿಗೆ ಉತ್ತರ ಪಡೆಯಲು ಬಯಸಿ ವೈಯಕ್ತಿಕ ಮಾಹಿತಿಯಾದ ಇ-ಮೇಲ್, ಅಂಚೆ ವಿಳಾಸವನ್ನು “ಸಬ್ಮಿಟ್(submit)” ಮಾಡಿದರೆ ಮಾತ್ರ ಆ ಮಾಹಿತಿಯನ್ನು ಮರು ಪ್ರತಿಕ್ರಿಯೆ ಉದ್ದೇಶಕ್ಕಾಗಿ ಪಡೆದುಕೊಳ್ಳಲಾಗುತ್ತದೆ. ಸಂದರ್ಶಕರು ಕೇಳಿದ ಮಾಹಿತಿಯು ಬೇರೊಂದು ಇಲಾಖೆ ಅಥವಾ ಏಜೆನ್ಸಿಗೆ ಸಂಬಂಧಿಸಿದ್ದರೆ ಅವರೊಂದಿಗೆ ಸಂದರ್ಶಕರ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಕಾನೂನಿಗೆ ನಿಮ್ಮ ಮಾಹಿತಿ ಅವಶ್ಯವಾಗಿದ್ದರೆ ಆಗಲೂ ಹಂಚಿಕೊಳ್ಳಬಹುದು.

2. ಖಾಸಗಿ ಅಥವಾ ಲಾಭದಾಯಕ ವ್ಯವಹಾರದ ಉದ್ದೇಶಕ್ಕೆ ಸಂದರ್ಶಕರ ವಿವರವನ್ನು ಸಿದ್ಧಪಡಿಸುವುದಾಗಲಿ ಅಥವಾ ಸಂಗ್ರಹಿಸುವುದಾಗಲಿ ಇಲಾಖೆ ಮಾಡುವುದಿಲ್ಲ. ಪ್ರಶ್ನೆಗಳನ್ನು ಕೇಳುವುದಕ್ಕೆ ಮತ್ತು ಕಮೆಂಟ್ ಮಾಡುವುದಕ್ಕೆ ಸಂದರ್ಶಕರ ಇ-ಮೇಲ್ ನೀಡುವುದು ಕಡ್ಡಾಯವಾಗಿರುತ್ತದೆ, ಅದರ ಹೊರತು ಯಾವುದೇ ವೈಯಕ್ತಿಕ ಮಾಹಿತಿಯನ್ನು ನೀಡುವುದಕ್ಕೆ ಇಲಾಖೆ ಪ್ರೋತ್ಸಾಹಿಸುವುದಿಲ್ಲ..

ಜಾಲತಾಣ ಸುರಕ್ಷತೆ

· ಈ ಸರ್ಕಾರಿ ಜಾಲತಾಣದ ಮಾಹಿತಿಯನ್ನು ಎಲ್ಲರಿಗೂ ನೀಡುವುದಕ್ಕೆ, ಅನಧಿಕೃತ ಬಳಕೆದಾರರು ಜಾಲತಾಣ ಪ್ರವೇಶಿಸುವುದು, ಜಾಲತಾಣದಲ್ಲಿನ ಮಾಹಿತಿಯನ್ನು ತಿರುಚುವುದು ಅಥವಾ ಹಾನಿಮಾಡುವುದನ್ನು ತಡೆಯುವುದಕ್ಕೆ ಮತ್ತು ಜಾಲತಾಣದ ಭದ್ರತೆ ದೃಷ್ಠಿಯಿಂದ ಹಾಗೂ ಸಂಪರ್ಕದಟ್ಟಣೆ ನಿವಾರಣೆಗಾಗಿ ಕಮರ್ಷಿಯಲ್ ಸಾಫ್ಟವೇರ್ ಪ್ರೋಗ್ರಾಮ್ ಗಳನ್ನು ಬಳಸಲಾಗುತ್ತದೆ.

· ಅಧಿಕೃತ ಕಾನೂನು ಸಂಸ್ಥೆಗಳನ್ನು ಹೊರತುಪಡೆಸಿ, ಸಂದರ್ಶಕರ ಅಥವಾ ಬಳಕೆದಾರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳನ್ನು ಮಾಡಲ್ಪಡುವುದಿಲ್ಲ. ಸಂದರ್ಶಕರ ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ.

· ಅನಧಿಕೃತರು ಈ ಜಾಲತಾಣದಲ್ಲಿ ಮಾಹಿತಿಯನ್ನು ಸೇರಿಸುವುದು, ಬದಲಾಯಿಸುವುದು ಕಾನೂನು ಬಾಹೀರವಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆ(2000)ರ ಅಡಿಯಲ್ಲಿ ದಂಡನಾರ್ಹವಾಗಿದೆ.

en_USEnglish