ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಶ್ರೀ ಬಸವರಾಜ ಬೊಮ್ಮಾಯಿ
ದಟ್ಟವಾದ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಕರ್ನಾಟಕದ ನೂತನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಸಿನಿಮಾ ಕ್ಷೇತ್ರದ ಕುರಿತೂ ಅಪಾರ ಪ್ರೀತಿಯನ್ನು ಇಟ್ಟುಕೊಂಡವರು. ಅಪರಿಮಿತ ಆಡಳಿತಾತ್ಮಕ ಅನುಭವವುಳ್ಳ ಅವರು ಚಿತ್ರರಂಗದ ಸಮಸ್ಯೆಗಳನ್ನೂ ಕೂಡ ತಲಸ್ಪರ್ಶಿಯಾಗಿ ಬಲ್ಲವರು. ಡಾ.ರಾಜ್ ಕುಮಾರ್ ಅವರೂ ಸೇರಿದಂತೆ ಚಿತ್ರರಂಗದ ಹಿರಿಯರ ಜೊತೆಗೆ ನಿಕಟ ಒಡನಾಟ ಹೊಂದಿದವರು. ಅವರ ಅಪಾರ ಅನುಭವ ಮತ್ತು ಸಿನಿಮಾ ಕುರಿತ ಪ್ರೀತಿ ನಮಗೆ ಮಾರ್ಗದರ್ಶಕವಾಗಿರಲಿದೆ, ಅವರ ಅವಧಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಇನ್ನಷ್ಟು ಪ್ರಗತಿಯನ್ನು ಸಾಧಿಸಲಿದೆ ಎಂಬ ವಿಶ್ವಾಸ ಮತ್ತು ನಿರೀಕ್ಷೆಯೊಂದಿಗೆ ಅವರಿಗೆ ಸ್ವಾಗತವನ್ನು ಕೋರುತ್ತಿದ್ದೇನೆ.

ಶ್ರೀ ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ

ಅಶೋಕ್ ಕಶ್ಯಪ್
ಅಧ್ಯಕ್ಷರು,
ಕರ್ನಾಟಕ ಚಲನಚಿತ್ರ ಅಕಾಡೆಮಿ
ಅಧ್ಯಕ್ಷರ ನುಡಿ
ಕರ್ನಾಟಕದ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನನ್ನಾಗಿ ನನ್ನನ್ನು ರಾಜ್ಯ ಸರ್ಕಾರ ನೇಮಿಸಿದ್ದು ಒಂದು ರೀತಿಯಲ್ಲಿ ನನಗೆ ಹೊಸ ವರ್ಷದ ಉಡುಗೊರೆ ಕೂಡ ಹೌದು! ಏಕೆಂದರೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶ ನನ್ನ ಕೈ ಸೇರಿದ್ದು 2020ರ ಜನವರಿ ಮೊದಲನೇ ತಾರೀಖಿನಂದು. ನಾನು ಇಷ್ಟ ಪಡುವ, ಕನಸುಗಳನ್ನು ಕಂಡ, ವೃತ್ತಿಯನ್ನಾಗಿ ಸ್ವೀಕರಿಸಿದ ಕ್ಷೇತ್ರಕ್ಕೆ ಕಿಂಚಿತ್ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯವೇ ಸರಿ.

Special Committees
ಸಾಕ್ಷ್ಯಚಿತ್ರ ನಿರ್ಮಾಣ ಸಂಚಾಲನ ಸಮಿತಿ
ಯುವಜನರಿಗೆ ಚಲನಚಿತ್ರ ನಿರ್ಮಾಣ, ನಿರ್ದೇಶನ, ನಟನೆ ಕುರಿತ ತರಬೇತಿ ಕಾರ್ಯಾಗಾರದ ಸಂಚಾಲನ ಸಮಿತಿ
ಮಹಿಳೆಯರಿಗೆ ಚಲನಚಿತ್ರ ನಟನೆ ಹಾಗೂ ತಾಂತ್ರಿಕ ಕೌಶಲ್ಯದ ತರಬೇತಿ
ಬೆಳ್ಳಿ ಮಂಡಲ –ಬೆಳ್ಳಿ ಸಾಕ್ಷಿ ಸಂಚಾಲನ ಸಮಿತಿ
ಫಿಲಂ ಮ್ಯೂಸಿಯಂ ಹಾಗೂ ಲೈಬ್ರರಿ ಸಂಚಾಲನ ಸಮಿತಿ
ಚಿತ್ರರಂಗದ ದಿಗ್ಗಜರ ದಿನಾಚರಣೆ ಸಂಚಾಲನ ಸಮಿತಿ
ಗಡಿ ಭಾಗಗಳಲ್ಲಿ ಚಲನಚಿತ್ರಮೇಳ ಸಂಚಾಲನ ಸಮಿತಿ
Upcoming 14th BIFFES
ದಿ. 30-09-2021 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಮಾಡಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಪ್ರತಿಷ್ಠಿತ “ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ” ಆಯೋಜನೆಗೆ ಅನುಮತಿ ಕೋರಲಾಯಿತು.
ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು ಫೆಬ್ರವರಿ 2022 ರಲ್ಲಿ ಚಲನಚಿತ್ರೋತ್ಸವ ನಡೆಸಲು ಅನುಮತಿ ನೀಡಿದ್ದಾರೆ ಹಾಗೂ ಕಾರ್ಯಕ್ರಮದ ದಿನಾಂಕವನ್ನು ಇನ್ನೊಂದು ಸುತ್ತಿನ ಸಭೆ ನಡೆಸಿ ಅಂತಿಮಗೊಳಿಸೋಣ ಎಂದು ತಿಳಿಸಿದರು. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಅಕಾಡೆಮಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

Milestones
Future Plans

Publications
Connect With Us
About us
Karnataka Chalanachitra Academy which came into being about six years ago has envisaged many creative and ambitious programmes to imbibe a culture of cinema and to spearhead academic excellence in this most profuse and effective medium.
Karnataka Chalanachitra Academy which came into being about six years ago has envisaged many creative and ambitious programmes to imbibe a culture of cinema and to spearhead academic excellence in this most profuse and effective medium.
In core, the Academy intends to better the skills of film making and to influence the film makers to cultivate a habit to produce films that will reach the audience along with socially relevant messages.