ಕರ್ನಾಟಕ ಚಲನಾಚಿತ್ರ ಅಕಾಡೆಮಿಗೆ ಸುಸ್ವಾಗತ

KARNATAKA
  • Best Film
    Best Film
  • Best Picture
  • Best Director
  • Best Screenplay
  • Award List
concert, audience, lights-1150042.jpg
Upcoming events
audience, band, club-1850665.jpg
Current activities

ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಶ್ರೀ ಬಸವರಾಜ ಬೊಮ್ಮಾಯಿ

ದಟ್ಟವಾದ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಕರ್ನಾಟಕದ ನೂತನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಸಿನಿಮಾ ಕ್ಷೇತ್ರದ ಕುರಿತೂ ಅಪಾರ ಪ್ರೀತಿಯನ್ನು ಇಟ್ಟುಕೊಂಡವರು. ಅಪರಿಮಿತ ಆಡಳಿತಾತ್ಮಕ ಅನುಭವವುಳ್ಳ ಅವರು ಚಿತ್ರರಂಗದ ಸಮಸ್ಯೆಗಳನ್ನೂ ಕೂಡ ತಲಸ್ಪರ್ಶಿಯಾಗಿ ಬಲ್ಲವರು. ಡಾ.ರಾಜ್ ಕುಮಾರ್ ಅವರೂ ಸೇರಿದಂತೆ ಚಿತ್ರರಂಗದ ಹಿರಿಯರ ಜೊತೆಗೆ ನಿಕಟ ಒಡನಾಟ ಹೊಂದಿದವರು. ಅವರ ಅಪಾರ ಅನುಭವ ಮತ್ತು ಸಿನಿಮಾ ಕುರಿತ ಪ್ರೀತಿ ನಮಗೆ ಮಾರ್ಗದರ್ಶಕವಾಗಿರಲಿದೆ, ಅವರ ಅವಧಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಇನ್ನಷ್ಟು ಪ್ರಗತಿಯನ್ನು ಸಾಧಿಸಲಿದೆ ಎಂಬ ವಿಶ್ವಾಸ ಮತ್ತು ನಿರೀಕ್ಷೆಯೊಂದಿಗೆ ಅವರಿಗೆ ಸ್ವಾಗತವನ್ನು ಕೋರುತ್ತಿದ್ದೇನೆ.

CM Bommai Ji
ಶ್ರೀ ಬಸವರಾಜ ಬೊಮ್ಮಾಯಿ

ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ

ಶ್ರೀ ಸಾಧು ಕೋಕಿಲ

ಅಧ್ಯಕ್ಷರು,
ಕರ್ನಾಟಕ ಚಲನಚಿತ್ರ ಅಕಾಡೆಮಿ

ಅಧ್ಯಕ್ಷರ ನುಡಿ

ಕರ್ನಾಟಕದ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನನ್ನಾಗಿ ನನ್ನನ್ನು ರಾಜ್ಯ ಸರ್ಕಾರ ನೇಮಿಸಿದ್ದು ಒಂದು ರೀತಿಯಲ್ಲಿ ನನಗೆ ಹೊಸ ವರ್ಷದ ಉಡುಗೊರೆ ಕೂಡ ಹೌದು! ಏಕೆಂದರೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶ ನನ್ನ ಕೈ ಸೇರಿದ್ದು 2020ರ ಜನವರಿ ಮೊದಲನೇ ತಾರೀಖಿನಂದು. ನಾನು ಇಷ್ಟ ಪಡುವ, ಕನಸುಗಳನ್ನು ಕಂಡ, ವೃತ್ತಿಯನ್ನಾಗಿ ಸ್ವೀಕರಿಸಿದ ಕ್ಷೇತ್ರಕ್ಕೆ ಕಿಂಚಿತ್ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯವೇ ಸರಿ.

film-roll

Special Committees

ಶ್ರೀ ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿಗಳು

Upcoming 15th BIFFES

ಬೆಂಗಳೂರು ನಗರದಲ್ಲಿ ನಡೆಯುವ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಸ್ಪರ್ಧಾತ್ಮಕ ವಿಭಾಗಗಳಿಗೆ ಕಥಾನಕ ಚಿತ್ರಗಳನ್ನು ಆಹ್ವಾನಿಸುತ್ತಿದೆ. ಈ ವರ್ಷದ ಫೆಬ್ರವರಿ 29ರಿಂದ ಮಾರ್ಚ್ 07ರವರೆಗೆ ನಡೆಯುವ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ಚಲನಚಿತ್ರಗಳಿಗೆ ಈ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳು ಅನ್ವಯಿಸುತ್ತದೆ.

ಸ್ಪರ್ಧೆಯು ಏಷಿಯಾ, ಭಾರತೀಯ ಹಾಗೂ ಕನ್ನಡ ಸಿನಿಮಾ ಎಂಬ ಮೂರು ವಿಭಾಗಗಳಲ್ಲಿರುತ್ತದೆ. ಪರಿಣಿತರ ಸಮಿತಿಗಳು ಸ್ಪರ್ಧೆಗೆ ಬಂದ ಚಿತ್ರಗಳನ್ನು ವೀಕ್ಷಿಸಿ, ಅಂತಿಮ ಸುತ್ತಿಗೆ ಮೂರು ವಿಭಾಗಗಳಿಂದ ತಲಾ 12 ಕಥಾಚಿತ್ರಗಳನ್ನು ಆಯ್ಕೆಮಾಡಿ ಕೊಡುತ್ತದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರು ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ಧಾರ ಕೈಗೊಳ್ಳಬಹುದಾದ ವಿಶೇಷ ಅಧಿಕಾರವನ್ನು ಹೊಂದಿರುತ್ತಾರೆ. ಏಷಿಯಾ, ಭಾರತೀಯ ಹಾಗೂ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಯಾದ ಚಿತ್ರಗಳನ್ನು ಅಂತಿಮವಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತೀರ್ಪುಗಾರರು ಪ್ರಶಸ್ತಿಗಾಗಿ ಆಯ್ಕೆ ಮಾಡುತ್ತಾರೆ.

15th BIFFES

Submission Guidelines

mile-stone

Milestones

  • ಯಶಸ್ವಿ 15 ನೇ ಚಿತ್ರೋತ್ಸವ
  • ಕಾರ್ಮಿಕರ ದತ್ತಿನಿಧಿ ತಿದ್ದುಪಡಿ
  • ಬೆಂಗಳೂರು ಚಿತ್ರೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ
  • ಅಪ್ಪಳಿಸಿದ ಕರೋನಾದ ಎರಡನೇ ಅಲೆ
  • ಸಂದರ್ಭದಲ್ಲಿ ಕಲಾವಿದರಿಗೆ ಸಹಾಯಹಸ್ತ
  • ಬೆಳ್ಳಿಮಂಡಲ-ಬೆಳ್ಳಿಹೆಜ್ಜೆಗೆ ಮರುಜೀವ
  • ಯುವಪ್ರತಿಭಾ ತರಬೇತಿ ಶಿಬಿರ
  • ಮಹಿಳೆಯರಿಗೆ ಸಿನಿಮಾ ತಂತ್ರಜ್ಞಾನ ತರಬೇತಿ

Future Plans

  • ಚಲನಚಿತ್ರ ಭಂಡಾರ
  • ಅಕಾಡೆಮಿ ಗ್ರಂಥಾಲಯ & ಪ್ರಕಟಣೆಗಳು
  • ಚಲನಚಿತ್ರ ಅಧ್ಯಯನಕ್ಕೆ ಹೊಸ ರೂಪ
  • ಅಕಾಡೆಮಿಯ ಕಟ್ಟಡದ ಸುರಕ್ಷತೆ
  • 15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಸಿದ್ದತೆ
  • ಗಡಿನಾಡ ಚಿತ್ರೋತ್ಸವ
  • ಜಾಗತಿಕಮಟ್ಟದ ಸಾಧನೆಯ ಕನ್ನಡಿಗರ ಸ್ಮರಣೆ
  • ಜಿಲ್ಲಾ ಉತ್ಸವಗಳು
  • ಕಥಾ ಕೋಶ ನಿರ್ಮಾಣ
  • ಅಕಾಡೆಮಿಯ ಪತ್ರಿಕೆ ರೂಪಿಸುವುದು, ವೆಬ್ ಸೈಟ್ ನಿರ್ಮಾಣ, ಮಾಹಿತಿ ಕೋಶ
  • ಮಹನೀಯರ ಕುರಿತ ಸಾಕ್ಷ್ಯಚಿತ್ರಗಳು

ಪ್ರಕಟಣೆಗಳು

Connect With Us

    ನಮ್ಮ ಬಗ್ಗೆ us

    ಸುಮಾರು ಆರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ಚಲನಾಚಿತ್ರ ಅಕಾಡೆಮಿ ಸಿನೆಮಾ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಮತ್ತು ಈ ಅತ್ಯಂತ ಸಮೃದ್ಧ ಮತ್ತು ಪರಿಣಾಮಕಾರಿ ಮಾಧ್ಯಮದಲ್ಲಿ ಶೈಕ್ಷಣಿಕ ಶ್ರೇಷ್ಠತೆಯನ್ನು ಮುನ್ನಡೆಸಲು ಅನೇಕ ಸೃಜನಶೀಲ ಮತ್ತು ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ರೂಪಿಸಿದೆ.

    ಸುಮಾರು ಆರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ಚಲನಾಚಿತ್ರ ಅಕಾಡೆಮಿ ಸಿನೆಮಾ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಮತ್ತು ಈ ಅತ್ಯಂತ ಸಮೃದ್ಧ ಮತ್ತು ಪರಿಣಾಮಕಾರಿ ಮಾಧ್ಯಮದಲ್ಲಿ ಶೈಕ್ಷಣಿಕ ಶ್ರೇಷ್ಠತೆಯನ್ನು ಮುನ್ನಡೆಸಲು ಅನೇಕ ಸೃಜನಶೀಲ ಮತ್ತು ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ರೂಪಿಸಿದೆ.

    ಮುಖ್ಯವಾಗಿ, ಅಕಾಡೆಮಿ ಚಲನಚಿತ್ರ ತಯಾರಿಕೆಯ ಕೌಶಲ್ಯಗಳನ್ನು ಉತ್ತಮಗೊಳಿಸಲು ಮತ್ತು ಸಾಮಾಜಿಕವಾಗಿ ಸಂಬಂಧಿಸಿದ ಸಂದೇಶಗಳೊಂದಿಗೆ ಪ್ರೇಕ್ಷಕರನ್ನು ತಲುಪುವಂತಹ ಚಲನಚಿತ್ರಗಳನ್ನು ನಿರ್ಮಿಸುವ ಅಭ್ಯಾಸವನ್ನು ಬೆಳೆಸಲು fi lm ತಯಾರಕರ ಮೇಲೆ ಪ್ರಭಾವ ಬೀರಲು ಉದ್ದೇಶಿಸಿದೆ.

    Play Video

    ನಮ್ಮ ಫ್ರ್ಯಾಂಚೈಸ್

    knಕನ್ನಡ